ನವ ದೆಹಲಿ : ಜೂನ್ ನಲ್ಲಿ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್ 101.81 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಸಿದೆ.
ಇದನ್ನೂ ಓದಿ : ಗಾಂಧಿ ಮಗ ಕುಡುಕನಾದ.. SR ಬೊಮ್ಮಾಯಿ ಗುಣ ಮಗನಿಗೆ ಬರುತ್ತೆ ಎಂದು ಹೇಳಲಾಗದು : ಸಿದ್ದರಾಮಯ್ಯ
ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ಬ್ಯಾಂಕ್ 21.46 ಕೋಟಿಯಷ್ಟು ನಿವ್ವಳ ಲಾಭ ಗಳಿಸಿತ್ತು. ಈ ವರ್ಷದ ಜೂನ್ ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ನ ಆದಾಯವು 4,539 ಕೋಟಿಗೆ ಹೆಚ್ಚಳವಾಗಿದೆ.
ಇನ್ನು, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ 4,436 ಕೋಟಿ ಲಾಭ ಗಳಿಸಿತ್ತು. ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 14.38ರಷ್ಟಿದ್ದ ಯುಕೋ ಬ್ಯಾಂಕ್ ನ ಎನ್ ಪಿಎ ಪ್ರಮಾಣ ಈ ಬಾರಿ ಶೇಕಡಾ 9.37ಕ್ಕೆ ಇಳಿಮುಖವಾಗಿದೆ.
ಇದನ್ನೂ ಓದಿ : ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ