Advertisement

Uchila: ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಹೊರೆಕಾಣಿಕೆ ಸಮರ್ಪಣೆ, ಸ್ವೀಕಾರಕ್ಕೆ ಚಾಲನೆ

11:43 PM Oct 01, 2024 | Team Udayavani |

 

Advertisement

ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 3ರಿಂದ 12ರ ವರೆಗೆ ಜರಗಲಿರುವ ಶರನ್ನವರಾತ್ರಿ ಮಹೋತ್ಸವದ ಪೂರ್ವಭಾವಿಯಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹೊರೆಕಾಣಿಕೆ ಸಮರ್ಪಣೆ ಮತ್ತು ಸ್ವೀಕಾರಕ್ಕೆ ಅ. 1ರಂದು ಚಾಲನೆ ನೀಡಲಾಯಿತು.

ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಮಾತನಾಡಿ, ಉಚ್ಚಿಲದಲ್ಲಿ ಹತ್ತು ದಿನಗಳ ಕಾಲ ಜರಗಲಿರುವ ಶರನ್ನವರಾತ್ರಿ ಮತ್ತು ದಸರಾ ಉತ್ಸವದಲ್ಲಿ ನಿತ್ಯ ಚಂಡಿಕಾಯಾಗ, ಕಲ್ಫೋಕ್ತ ಪೂಜೆ, ಅನ್ನಸಂತರ್ಪಣೆ, ನಿತ್ಯಭಜನೆ ಮತ್ತು
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ವೇಳೆ ನಡೆಯುವ ಅನ್ನಸಂತರ್ಪಣೆ, ಉಪಾಹಾರ ಮತ್ತು ಪ್ರಸಾದ ವಿತರಣೆಯ ಉದ್ದೇಶದಿಂದ ಹೊರೆಕಾಣಿಕೆ ಸ್ವೀಕರಿಸಲಾಗುತ್ತಿದ್ದು ಅಕ್ಕಿ, ಬೇಳೆ, ತೊಗರಿಬೇಳೆ, ತೆಂಗಿನಕಾಯಿ, ತರಕಾರಿ ವಸ್ತುಗಳನ್ನು ಹೊರೆಕಾಣಿಕೆ ರೂಪದಲ್ಲಿ ಸ್ವೀಕರಿಸಲಾಗುವುದು ಎಂದರು.

ಯಥೇಚ್ಛ ಸೇವೆಯ ಅವಕಾಶ
ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ರಾಘವೇಂದ್ರ ಉಪಾಧ್ಯಾಯ ಮಾತನಾಡಿ, ಉಡುಪಿ ಉಚ್ಚಿಲ ದಸರಾ ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ವಿವಿಧ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಶರನ್ನವರಾತ್ರಿ ಮಹೋತ್ಸವ, ನವದುರ್ಗೆಯರು, ಶಾರದಾ ಮಾತೆಯ ಆರಾಧನೆಯಿಂದ ಮಲ್ಪೆ ಬಂದರು,ಮಂಗಳೂರು ಬಂದರು ಸಹಿತ ಸಮುದ್ರದಲ್ಲಿ ಕೆಲಸ ಮಾಡುವವರಿಗೆ ಹೇರಳ ಮತ್ಸ್ಯ ಸಂಪತ್ತು ದೊರಕಿಸಿಕೊಟ್ಟು ಯಥೇಚ್ಚ ಸೇವೆ ನೀಡುವ ಅವಕಾಶ ಒದಗಿ ಬರಲಿ ಎಂದು ಪ್ರಾರ್ಥಿಸಿದರು.

Advertisement

ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್‌ ಸುವರ್ಣ, ಮಹಾಜನ ಸಂಘದ ಪ್ರ. ಕಾರ್ಯದರ್ಶಿ ಶರಣ್‌ ಕುಮಾರ್‌ ಮಟ್ಟು, ಜ. ಕಾರ್ಯದರ್ಶಿ ಸುಜಿತ್‌ ಸಾಲ್ಯಾನ್‌, ಪ್ರಮುಖರಾದ ವಾಸುದೇವ ಸಾಲ್ಯಾನ್‌, ಗುಂಡು ಬಿ. ಅಮೀನ್‌, ಮೋಹನ್‌ ಬಂಗೇರ, ಸುಧಾಕರ ಕುಂದರ್‌, ಉಷಾರಾಣಿ ಬೋಳೂರು, ಸತೀಶ್‌ ಅಮೀನ್‌ ಬಾಕೂìರು, ಸಂಕರ್‌ ಸಾಲ್ಯಾನ್‌, ರವೀಂದ್ರ ಶ್ರೀಯಾನ್‌, ನಾರಾಯಣ ಕರ್ಕೇರ, ಸತೀಶ್‌ ಎರ್ಮಾಳು, ಭರತ್‌ ಎರ್ಮಾಳು, ದಿನೇಶ್‌ ಎರ್ಮಾಳು, ಸುಗುಣಾ ಕರ್ಕೇರ, ಮನೋಜ್‌ ಕಾಂಚನ್‌, ದಾಮೋದರ ಸುವರ್ಣ, ಅಶೋಕ್‌ ಸಾಲ್ಯಾನ್‌, ಪ್ರಬಂಧಕ ಸತೀಶ್‌ ಅಮೀನ್‌ ಪಡುಕೆರೆ ಉಪಸ್ಥಿತರಿದ್ದರು.

ಫಲಪುಷ್ಪ ಪ್ರದರ್ಶನ
ಉಚ್ಚಿಲ ದಸರಾ ಪ್ರಯುಕ್ತ ಅ. 3ರಿಂದ 12 ರವರೆಗೆ ಫ‌ಲ ಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಪುಸ್ತಕ ಮೇಳ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ನಡೆಯಲಿದೆ.

ವಿದ್ಯುತ್‌ ದೀಪಾಲಂಕಾರ ಉದ್ಘಾಟನೆ
ಅ. 3ರ ಸಂಜೆ 6ಕ್ಕೆ ಪ್ರಾಯೋಜಕರಾದ ಎಂಆರ್‌ಜಿ ಗ್ರೂಫ್‌ನ ಅಧ್ಯಕ್ಷ ಡಾ| ಕೆ. ಪ್ರಕಾಶ್‌ ಶೆಟ್ಟಿ ಬಂಜಾರ ಅವರು ದಸರಾ ಪ್ರಯುಕ್ತ ವಿಶೇಷ ವಿದ್ಯುತ್‌ ದೀಪಾಲಂಕಾರ ವನ್ನು ಉದ್ಘಾಟಿಸಲಿದ್ದಾರೆ.

ಅ. 3ರಿಂದ ಅ. 12ರ ವರೆಗೆ ದೇವಸ್ಥಾನದ ಆವರಣದಲ್ಲಿ ಪ್ರತೀ ದಿನ ರಾತ್ರಿ 8ರಿಂದ 8.10ರ ವರೆಗೆ ವಿಶೇಷ ಲೇಸರ್‌ ಶೋ ಪ್ರದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next