ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಮೊಗವೀರರ ಕುಲಮಾತೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವರ ವರ್ಷಾವಧಿ ಶ್ರೀಮನ್ಮಹಾರಥೋತ್ಸವ ಬುಧವಾರ ನಡೆಯಿತು.
ದೇವಸ್ಥಾನದ ಪ್ರಧಾನ ತಂತ್ರಿಗಳಾದ ವೇ| ಮೂ| ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇ| ಮೂ| ವೆಂಕಟ ನರಸಿಂಹ ಉಪಾಧ್ಯಾಯ ಮತ್ತು ರಾಘವೇಂದ್ರ ಉಪಾಧ್ಯಾಯ ಅವರ ಹಿರಿಯನದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು. ಮಧ್ಯಾಹ್ನ ಸಾಮೂಹಿಕ ಭೂರಿಭೋಜನ ನಡೆಯಿತು.
ಕಾಸರಗೋಡಿನ ಉಪ್ಪಳದಿಂದ ಉಡುಪಿ ಜಿಲ್ಲೆಯ ಮಣೂರು ವರೆಗಿನ ವಿವಿಧ ಗ್ರಾಮಗಳ ಕೂಡುಕಟ್ಟುಗಳ ಮೊಗವೀರ ಜನಾಂಗದವರು ತಮ್ಮ ಕುಲ ಕಸುಬಿಗೆ ರಜೆ ಸಾರಿ ಇಂದಿನ ಈ ರಥೋತ್ಸವಕ್ಕೆ ಆಗಮಿಸಿದ್ದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರ, ಉಪಾಧ್ಯಕ್ಷ ಕೇಶವ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೂರಾಡಿ, ನಾಡೋಜ ಡಾ| ಜಿ. ಶಂಕರ್, ಎನ್.ಡಿ. ಬಂಗೇರ, ಶ್ರೀ ಮಹಾಲಕ್ಷಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ತಿಮ್ಮ ಮರಕಾಲ, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಸರಳಾ ಕಾಂಚನ್, ಕಾರ್ಯದರ್ಶಿ ಸೇವಂತಿ ಸದಾಶಿವ, ಮಾಜಿ ಅಧ್ಯಕ್ಷ ಕೇಶವ ಕುಂದರ್, ವಾಸುದೇವ ಸಾಲ್ಯಾನ್, ಗಂಗಾಧರ ಸುವರ್ಣ, ಶರತ್ ಗುಡ್ಡೆಕೊಪ್ಲ, ಮಾಜಿ ಶಾಸಕ ಲಾಲಾಜಿ ಮೆಂಡನ್, ವಾಸುದೇವ ಸಾಲ್ಯಾನ್, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ಬಂಗೇರ, ವೇದವ್ಯಾಸ ಬಂಗೇರ, ದ.ಕ. ಮೊಗವೀರ ಸಂಘದ ಮುಂಬಯಿ ಘಟಕದ ಬಿ.ಜೆ. ಶ್ರೀಯಾನ್, ಮತ್ತಿತರ ವಿವಿಧ ಕೂಡುವಳಿಯ ಪ್ರಧಾನರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿಯಿತ್ತರು.