Advertisement
ಮೊಗವೀರ ಮಹಾಜನ ಸಂಘದ ವ್ಯಾಪ್ತಿಯ ಉಳ್ಳಾಲದಿಂದ ಶೀರೂರು ವರೆಗಿನ ಮೂರು ಹೋಬಳಿಗಳ ವಿವಿಧ ದೇವಸ್ಥಾನ, ಸಂಘ ಸಂಸ್ಥೆಗಳು, ವಿವಿಧ ಶಾಖೆಗಳ ಪ್ರತಿನಿಧಿಗಳು, ಮಹಿಳಾ ವಿಭಾಗ, ಕಾಪು ನಾಲ್ಕು ಪಟ್ಣ ಮೊಗವೀರ ಮಹಾಸಭಾ ಮತ್ತು ಮೊಗವೀರ ಮಹಿಳಾ ಸಂಘದ ಸದಸ್ಯರ ಸಹಿತ ವಿವಿಧ ಊರುಗಳಿಂದ ಬಂದಿರುವ ಸಾವಿರಾರು ಮಂದಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾರ್ಗದರ್ಶನದಲ್ಲಿ ಸ್ವಯಂಸೇವಕರ ನಿರ್ವಹಣೆಗಾಗಿ ಸತೀಶ್ ಕುಂದರ್ ಮತ್ತು ಶರಣ್ ಮಟ್ಟು ನೇತೃತ್ವದಲ್ಲಿ 18
ಉಪಸಮಿತಿಗಳನ್ನು ರಚಿಸಲಾಗಿದ್ದು ಪ್ರತೀ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು ಮತ್ತು ಸದಸ್ಯರು ದಿನದ 24 ಗಂಟೆಯೂ ತಮ್ಮ ಪಾಳಿಗಳಲ್ಲಿ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಅರ್ಚಕರು, ಋತ್ವಿಜರ ಸಹಕಾರ ದೊಂದಿಗೆ ನಿತ್ಯ ಚಂಡಿಕಾ ಹೋಮ, ಅಲಂಕಾರ ಪೂಜೆ, ಕಲ್ಪೋಕ್ತ ಪೂಜೆ, ನವ ದುರ್ಗೆಯರು, ಶಾರದಾ ಮಾತೆಗೆ ನಿತ್ಯ ಪೂಜೆ, ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆಯುತ್ತಿದೆ. ವಿವಿಧ ಭಾಗಗಳ ಮಹಿಳೆ ಯರು ನಿತ್ಯ ಪ್ರಸಾದ ತಯಾರಿಯಲ್ಲಿ ನಿರತ ರಾಗಿದ್ದಾರೆ. ಸ್ವತ್ಛತೆ, ಸರತಿ ಸಾಲಿನಲ್ಲಿ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡುವುದು, ನಾಣ್ಯ ಎಣಿಕೆ ಮೊದಲಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ವ್ಯವಸ್ಥೆಗಳ ನಿರ್ವಹಣ ಸಮಿತಿಗಳ ಸದಸ್ಯರು ಅಚ್ಚುಕಟ್ಟಿನ ಸೇವೆ ನೀಡುತ್ತಿದ್ದಾರೆ.
Related Articles
Advertisement
ಅನ್ನಸಂತರ್ಪಣೆಯಲ್ಲಿ ಹೋಳಿಗೆ, ಮೋಹನ್ ಲಡ್ಡು, ರವಾ ಲಡ್ಡು, ಜಿಲೇಬಿ, ಕೊಕೋ ಬರ್ಫಿ, ಸಾಟ್, ಪಂಚರತ್ನ ಕಡಿ, ಗೋಧಿ ಕಡಿ ಸಹಿತ ವಿವಿಧ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ. ಮಹಾಚಂಡಿಕಾ ಯಾಗದಂದು ಭುವನೇಂದ್ರ ಕಿದಿಯೂರು ಅವರ ಸೇವಾರ್ಥ ಹಾಲು ಪಾಯಸ ಸೇವೆ ನಡೆಯಲಿದೆ.
ಪಾಲ್ಗೊಳ್ಳುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿವಿಧ ಕಾರ್ಯಕ್ರಮ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ನಡೆಯುತ್ತಿವೆ. ಅನ್ನ ಸಂತರ್ಪಣೆ, ಉಪಾಹಾರ ವಿತರಣೆಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧ ಸೌಕರ್ಯ, ಸೌಲಭ್ಯಗಳನ್ನು ಜೋಡಿಸಲಾಗಿದ್ದು ಯಾವುದೇ ರೀತಿಯಲ್ಲೂ ಕುಂದಾಗದಂತೆ ಮೊಗವೀರಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ಸ್ವಯಂಸೇವಕರ ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎನ್ನುತ್ತಾರೆ ರೂವಾರಿ
ಡಾ| ಜಿ. ಶಂಕರ್