Advertisement

Uchila Dasara 2024 ಪೂರ್ವಭಾವಿ ಸಭೆ: ಮೂರನೇ ವರ್ಷದ ದಸರಾಕ್ಕೆ ಸಿದ್ಧತೆ: ಡಾ| ಜಿ. ಶಂಕರ್‌

10:57 PM Jul 17, 2024 | Team Udayavani |

ಕಾಪು: ಉಚ್ಚಿಲ ಶ್ರೀ ಮಹಾಲಕ್ಷಿ$¾à ದೇವಸ್ಥಾನದಲ್ಲಿ ಸಮಸ್ತ ಭಕ್ತ ಬಾಂಧವರ ಸಹಕಾರ ಸಹಯೋಗದೊಂದಿಗೆ ಈ ಬಾರಿ ನಡೆಯಲಿರುವ ಮೂರನೇ ವರ್ಷದ “ಉಚ್ಚಿಲ ದಸರಾ ಉತ್ಸವ – 2024′ ಅನ್ನು ಶಿಸ್ತುಬದ್ಧವಾಗಿ, ಸಾಂಪ್ರದಾಯಿಕವಾಗಿ ಹಾಗೂ ವಿಭಿನ್ನವಾದ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲು ನಿರ್ಧರಿ ಸಲಾಗಿದೆ ಎಂದು ಉಚ್ಚಿಲ ದಸರಾ ರೂವಾರಿ, ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್‌ ವಿನಂತಿಸಿದರು.

Advertisement

ಜು. 17ರಂದು ಉಚ್ಚಿಲ ಮೊಗವೀರ ಭವನದಲ್ಲಿ ಜರಗಿದ ಉಚ್ಚಿಲ ದಸರಾ ಉತ್ಸವ 2024 ಇದರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅ. 3ರಿಂದ ಅ. 12ರ ವರೆಗೆ ದಸರಾ ನಡೆಯಲಿದೆ. ಕ್ಷೇತ್ರದಲ್ಲಿ ಪ್ರತಿನಿತ್ಯ ಚಂಡಿಕಾ ಯಾಗ, ಭಜನೆ, ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಖ್ಯಾತ ಕಲಾವಿದರು ಹಾಗೂ ಸ್ಥಳೀಯ ಮಹಿಳೆಯರಿಂದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಸಾರ್ವಜನಿಕ ಉಪಾಹಾರದ ವ್ಯವಸ್ಥೆ ಮಾಡಲಾಗುವುದು.

ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮುದ್ದು ಮಕ್ಕಳಿಗಾಗಿ ಶಾರದಾ ಮಾತೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಗಾಗಿ ಹುಲಿ ಕುಣಿತ ಸ್ಪರ್ಧೆ, ಮೈಸೂರು ದಸರಾ ಮಾದರಿಯಲ್ಲಿ ಕುಸ್ತಿ ಹಾಗೂ ದೇಹದಾರ್ಢ್ಯ ಸ್ಪರ್ಧೆ, ಸಾಮೂಹಿಕ ದಾಂಡಿಯ ನೃತ್ಯ, ಕರಾವಳಿಯ ವಿವಿಧ ತಂಡಗಳಿಂದ ಸಾಮೂಹಿಕ ಕುಣಿತ ಭಜನೆ ಆಯೋಜಿಸಲಾಗುವುದು ಎಂದರು.

Advertisement

ಅ.12ರಂದು ವೈಭವದ ಶೋಭಾ ಯಾತ್ರೆ ನಡೆಯಲಿದ್ದು, ಕಾಪು ದೀಪಸ್ತಂಭದ ಬಳಿ ವಿಗ್ರಹಗಳ ವಿಸರ್ಜನೆ ನಡೆಯಲಿದೆ. ಈ ವೇಳೆ ಸಮುದ್ರ ಮಧ್ಯೆ ಬೋಟುಗಳಿಂದ ವಿದ್ಯುತ್‌ ದೀಪಾಲಂಕಾರ, ಲೇಸರ್‌ ಶೋ, ಮಹಿಳೆಯರಿಂದ ಸಾಮೂಹಿಕ ಮಂಗಳಾರತಿ ನಡೆಯಲಿದೆ. ಕಾಶಿ ವಿಶ್ವನಾಥ ಸನ್ನಿಧಿಯಿಂದ ಆಗಮಿಸುವ ಅರ್ಚಕರಿಂದ ಬೃಹ‌ತ್‌ ಗಂಗಾರತಿ ನಡೆಯಲಿದೆ ಎಂದರು.

ವಿನಯ್‌ ಕರ್ಕೇರ ಮಲ್ಪೆ ಅವರನ್ನು ದಸರಾ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಉಡುಪಿ ಶಾಸಕ ಯಶ್‌ಪಾಲ್‌ ಎ. ಸುವರ್ಣ, ಉಚ್ಚಿಲ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್‌ ಎಸ್‌. ಸುವರ್ಣ, ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್‌ ಬೆಂಗ್ರೆ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್‌, ಚೇತನ್‌ ಬೇಂಗ್ರೆ, ವರದರಾಜ ಬಂಗೇರ ಮಂಗಳೂರು, ಮನೋಜ್‌ ಕಾಂಚನ್‌, ಸತೀಶ್‌ ಅಮೀನ್‌ ಬಾಕೂìರು, ರತ್ನಾಕರ ಸಾಲ್ಯಾನ್‌ ಮಲ್ಪೆ, ನಾಗರಾಜ ಸುವರ್ಣ, ಜಯಂತ್‌ ಅಮೀನ್‌ ಕೋಡಿ, ಮನೋಹರ್‌ ಬೋಳೂರು, ಸುಜಿತ್‌ ಸಾಲ್ಯಾನ್‌ ಮೂಲ್ಕಿ, ಉಷಾರಾಣಿ ಬೋಳೂರು, ಸುಗುಣಾ ಕರ್ಕೇರ ಮೂಳೂರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶರಣ್‌ ಕುಮಾರ್‌ ಮಟ್ಟು ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next