Advertisement
ಪ್ರಧಾನ ತಂತ್ರಿ ವೇ| ಮೂ| ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಮಹಾಚಂಡಿಕಾ ಯಾಗ ನಡೆಯಿತು. 30 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದು ಉದ್ಯಮಿ ಭುವನೇಂದ್ರ ಕಿದಿಯೂರು ಅವರ ಸೇವಾರ್ಥ ಹಾಲು ಪಾಯಸ ವಿತರಿಸಲಾಯಿತು.
ನವರಾತ್ರಿ ಮತ್ತು ದಸರಾ ಉತ್ಸವದ ಪ್ರಯುಕ್ತ ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಾನದಲ್ಲಿ 10 ದಿನಗಳ ಅವಧಿಯಲ್ಲಿ ಮಹಾಚಂಡಿಕಾ ಯಾಗ ಸೇರಿದಂತೆ 129 ಚಂಡಿಕಾ ಯಾಗ, 50 ಕಲೊ³àಕ್ತ ಪೂಜೆ ನಡೆದಿದೆ. ಮಂಗಳವಾರ ಸಾಮೂಹಿಕ ಮಹಾಚಂಡಿಕಾ ಯಾಗದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಸೇವಾರ್ಥಿಗಳು ಪಾಲ್ಗೊಂಡಿದ್ದರು. 9ದಿನಗಳ ಸಹಸ್ರ ಕುಂಕುಮಾರ್ಚನೆ ಸೇವೆಯಲ್ಲಿ ಹತ್ತು ಲಕ್ಷ ಸಂಖ್ಯೆಯಲ್ಲಿ ಕುಂಕುಮಾರ್ಚನೆ ಸಮರ್ಪಿಸ ಲಾಯಿತು. ಮೂರು ಲಕ್ಷಕ್ಕೂ ಅಧಿಕ ಮಂದಿ ಅನ್ನಪ್ರಸಾದ ಮತ್ತು ಸಂಜೆ ಉಪಾಹಾರ ಪ್ರಸಾದ ಸ್ವೀಕರಿಸಿದರು. ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಶಾಸಕ ಯಶ್‌ಪಾಲ್ ಸುವರ್ಣ, ಉದ್ಯಮಿ ಭುವನೇಂದ್ರ ಕಿದಿಯೂರು, ಮಹಾಜನ ಸಂಘದ ಮಾಜಿ ಅಧ್ಯಕ್ಷ ಕೇಶವ ಕುಂದರ್, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಕಾಂಚನ್, ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕಾರ್ಯದರ್ಶಿ ಸುಧಾಕರ್ ಕುಂದರ್, ಕೋಶಾಧಿಕಾರಿ ಭರತ್ ಎರ್ಮಾಳು, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಆಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಮೊಗವೀರ ಯುವ ಸಂಘಟನೆೆಯ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ, ಪ್ರಮುಖರಾದ ಶೇಖರ ಸಾಲ್ಯಾನ್, ಶಂಕರ ಸಾಲ್ಯಾನ್, ಮೋಹನ್ ಬೆಂಗ್ರೆ, ಅನಿಲ್ ಕುಮಾರ್, ವೈ. ಗಂಗಾಧರ ಸುವರ್ಣ, ಹರಿಯಪ್ಪ ಕೋಟ್ಯಾನ್, ಚೇತನ್ ಬೆಂಗ್ರೆ, ಉಮೇಶ್ ಟಿ. ಕರ್ಕೇರ, ಭರತ್ ಕುಮಾರ್ ಉಳ್ಳಾಲ, ಹರಿಯಪ್ಪ ಕೋಟ್ಯಾನ್, ವಿನಯ್ ಕರ್ಕೇರ, ಸತೀಶ್ ಕುಂದರ್, ಶರಣ್ ಕುಮಾರ್ ಮಟ್ಟು, ಶಿವಕುಮಾರ್ ಮೆಂಡನ್, ಸರ್ವೋತ್ತಮ ಕುಂದರ್, ದಿನೇಶ್ ಎರ್ಮಾಳು, ಮೋಹನ್ ಬಂಗೇರ, ವಿಶ್ವಾಸ್ ಅಮೀನ್, ಸತೀಶ್ ಅಮೀನ್ ಪಡುಕೆರೆ, ಶ್ರೀಪತಿ ಭಟ್ ಪಾಲ್ಗೊಂಡಿದ್ದರು.