Advertisement
ಗುರುವಾರ ಸಂಜೆ 4.30ರಿಂದ ವಿದುಷಿ ಪವನ ಬಿ. ಆಚಾರ್ ಮಣಿಪಾಲ ಇವರ ನಿರ್ದೇಶನದಲ್ಲಿ ಏಕಕಾಲದಲ್ಲಿ ನೂರ ಐವತ್ತೂಂದು ವೀಣಾ ವಾದಕರ ಸಹಭಾಗಿತ್ವದೊಂದಿಗೆ ಶತವೀಣಾವಲ್ಲರಿ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದೆ.
ಪೂರ್ವಾಹ್ನ 9ಕ್ಕೆ ನಿತ್ಯ ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, 8.30ಕ್ಕೆ ಅಂಬಿಕಾ ಕಲೊಕ್ತ ಪೂಜೆ ನೆರವೇರಲಿದೆ. ಝಗಮಗಿಸುತ್ತಿದೆ ಉಚ್ಚಿಲ
ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ನವದುರ್ಗೆಯರು ಮತ್ತು ಶಾರದಾ ಮಂಟಪ ಸಹಿತ ಉಚ್ಚಿಲ-
ಎರ್ಮಾಳು-ಕಾಪುವರೆಗಿನ 12 ಕಿ.ಮೀ. ಉದ್ದದವರೆಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
Related Articles
ಬುಧವಾರ ಭಾಸ್ಕರ ರೈ ಕುಕ್ಕುವಳ್ಳಿ ಧಾರ್ಮಿಕ ಉಪನ್ಯಾಸ ನೀಡಿದರು. ಮಾಹೆ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ದಂಪತಿ, ಡಿವೈಎಸ್ಪಿ ಜೈಶಂಕರ್ ಕೆ., ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮೊದಲಾದವವರನ್ನು ಡಾ| ಜಿ. ಶಂಕರ್ ಗೌರವಿಸಿದರು.
Advertisement
ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮತ್ತಷ್ಟು ಜನಾಕರ್ಷಣೆಗೆ ಒತ್ತುಉಚ್ಚಿಲ ದಸರಾ ಕೇವಲ ಪೂಜಾ ಕಾರ್ಯಕ್ರಮಗಳಿಗೆ ಮಾತ್ರಾ ಸೀಮಿತವಾಗಿರಿಸದೇ ನಿರಂತರ ಭಜನೆ, ಸಾಂಸ್ಕೃತಿಕ ವೈಭವ, ಊಟೋಪಚಾರಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ. ಫಲಪುಷ್ಪ, ಪ್ರಾಣಿ, ಪಕ್ಷಿಗಳ ಪ್ರದರ್ಶನ, ಪುಸ್ತಕ ಮೇಳ, ಛಾಯಾಚಿತ್ರ ಪ್ರದರ್ಶನ, ಸಾಂಪ್ರದಾಯಿಕ ಮೀನುಗಾರಿಕಾ ಸಲಕರಣೆಗಳ ಪ್ರದರ್ಶನಕ್ಕೂ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದ್ದು ಜನಾಕರ್ಷಣೆಗೆ ಕಾರಣವಾಗಲಿದೆ ಎಂದು ಡಾ| ಜಿ. ಶಂಕರ್ ತಿಳಿಸಿದ್ದಾರೆ.