Advertisement

ರಿಜ್ವಾನ್‌, ಉಸ್ಮಾನ್‌ ಶತಕ; ಯುಎಇಗೆ 6 ವಿಕೆಟ್‌ ಜಯ

12:43 AM Jan 09, 2021 | Team Udayavani |

ಅಬುಧಾಬಿ: ಐರ್ಲೆಂಡ್‌ ನೀಡಿದ ದೊಡ್ಡ ಮೊತ್ತದ ಸವಾಲನ್ನು ದಿಟ್ಟ ರೀತಿಯಲ್ಲಿ  ಬೆನ್ನಟ್ಟಿದ  ಯುಎಇ, ಮೊದಲ ಏಕದಿನ ಪಂದ್ಯ ವನ್ನು 6 ವಿಕೆಟ್‌ಗಳಿಂದ ಜಯಿಸಿದೆ.

Advertisement

ಆರಂಭಕಾರ ಪಾಲ್‌ ಸ್ಟರ್ಲಿಂಗ್‌ ಅವರ 131 ರನ್‌ ಪರಾಕ್ರಮದಿಂದ ಐರ್ಲೆಂಡ್‌ 5 ವಿಕೆಟಿಗೆ 269 ರನ್‌ ಪೇರಿಸಿದರೆ, ಯುಎಇ 49 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 270 ರನ್‌ ಬಾರಿಸಿತು. ಸಿ. ರಿಜ್ವಾನ್‌ 109 ಮತ್ತು ಮುಹಮ್ಮದ್‌ ಉಸ್ಮಾನ್‌ ಅಜೇಯ 102 ರನ್‌ ಹೊಡೆದು ತಂಡದ ಗೆಲುವಿಗೆ ಕಾರಣರಾದರು.

ಇಬ್ಬರಿಗೆ ಕೋವಿಡ್ ಈ ಪಂದ್ಯಕ್ಕೂ ಮೊದಲು ಯುಎಇಯ ಇಬ್ಬರು ಕ್ರಿಕೆಟಿಗರಲ್ಲಿ ಕೊರೊನಾ  ಪಾಸಿಟಿವ್‌ ಕಂಡು ಬಂತು. ಇವರೆಂದರೆ, ಯುಎಇ ತಂಡದ ಉಪನಾಯಕ ಸಿರಾಗ್‌ ಸುರಿ ಮತ್ತು ಆರ್ಯನ್‌ ಲಾಕ್ರಾ. ಇವರಿಬ್ಬರೂ ಈಗ ಐಸೊಲೇಶನ್‌ನಲ್ಲಿದ್ದಾರೆ ಎಂದು ಯುಎಇ ಕ್ರಿಕೆಟ್‌ ಮಂಡಳಿಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next