Advertisement

ನಕಲಿ ಏಜೆನ್ಸಿಗಳ ಕುತಂತ್ರದಿಂದ ಮೋಸ ಹೋಗಿದ್ದ ಕೇರಳದ ನರ್ಸ್ ಗಳಿಗೆ ಯುಎಇ ಸಂಸ್ಥೆಗಳ ನೆರವು

08:46 AM May 23, 2021 | Team Udayavani |

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಕೆಲಸ ಕೊಡಿಸುವುದಾಗಿ ನಂಬಿಸಿದ್ದ ನಕಲಿ ನೌಕರಿ ಏಜೆನ್ಸಿಗಳ ಮೋಸದಾಟಕ್ಕೆ ಸಿಲುಕಿರುವ ಕೇರಳದ ಶುಶ್ರೂಷಕಿಯರ ನೆರವಿಗೆ ಯುಎಇಯಲ್ಲಿರುವ ಕೆಲವು ಪ್ರಮುಖ ಆರೋಗ್ಯ ಸೇವಾ ಸಂಸ್ಥೆಗಳು ಧಾವಿಸಿವೆ.

Advertisement

ಯುಎಇಗೆ ತೆರಳಿದ ನಂತರ ಅಸಲಿ ವಿಷಯ ಗೊತ್ತಾಗಿ, ಭಾರತಕ್ಕೂ ಹಿಂದಿರುಗಲಾಗದಂಥ ಪರಿಸ್ಥಿತಿಯಲ್ಲಿ ಇದ್ದ ಅವರ ನೆರವಿಗೆ ಬಂದಿರುವ ಯುಎಇ ಆರೋಗ್ಯ ಸಂಸ್ಥೆಗಳ ಪದಾಧಿಕಾರಿಗಳು ಅವರಿಗೆ ಯುಎಇನಲ್ಲೇ ನೌಕರಿ ಕೊಡಿಸುವುದಾಗಿ ತಿಳಿಸಿದ್ದು, ಸದ್ಯದಲ್ಲೇ ಅವರಿಗೆ ಯುಎಇಯಲ್ಲಿ ನೌಕರಿ ಮಾಡಲು ಬೇಕಾದ ಪರವಾನಗಿಯನ್ನುಕೊಡಿಸುವ ಭರವಸೆ ನೀಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಸ್ಟರ್‌ ಡಿಎಂ ಹೆಲ್ತ್‌ ಕೇರ್‌ನ ಮುಖ್ಯಸ್ಥ ಡಾ. ಆಜಾದ್‌ ಮೂಪೆನ್‌,””ಭಾರತದಿಂದ ಬಂದಿರುವ ಶುಶ್ರೂಷಕಿಯರಲ್ಲಿ ಅರ್ಹರಿಗೆ ಪರವಾನಗಿ ಕೊಡಿಸಲಾಗುತ್ತದೆ ಹಾಗೂ ಅವರನ್ನು ಯುಎಇಯ ಆಸ್ಪತ್ರೆಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ”ಎಂದಿದ್ದಾರೆ.

ಏಜೆನ್ಸಿಯವರ ಭರವಸೆಗಳನ್ನು ನಂಬಿ, ತಲಾ2ರಿಂದ 3.50ಲಕ್ಷ ರೂ.ಗಳವರೆಗೆ ಹಣ ಕಳೆದುಕೊಂಡಿದ್ದಾರೆ. ಯುಎಇಯಲ್ಲಿರುವ ಲಸಿಕಾ ಕೇಂದ್ರಗಳಲ್ಲಿ ಹಾಗೂ ಕೊರೊನಾ ಪರೀಕ್ಷಾ ಕೇಂದ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಶುಶ್ರೂಷಕಿಯರನ್ನು ಭಾರತದಿಂದ ಯುಎಇಗೆ ಕರೆದುಕೊಂಡು ಹೋಗಿದ್ದ ಏಜೆನ್ಸಿಗಳು ಅಲ್ಲಿ ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next