Advertisement

ದುಬೈಯಲ್ಲಿ ಡಿ.1ರಿಂದ 3ರ ವರೆಗೆ ಪಾರ್ಕಿಂಗ್‌ ಉಚಿತ

09:45 AM Nov 29, 2019 | Team Udayavani |

ದುಬೈ: ದುಬೈಯಲ್ಲಿ ಡಿಸೆಂಬರ್‌ 1ರಿಂದ 3ರ ವರೆಗೆ ಉಚಿತ ಪಾರ್ಕಿಂಗ್‌ ಲಭ್ಯವಾಗಲಿದೆ. ಡಿಸೆಂಬರ್‌ 1ರಿಂದ 3ರ ವರೆಗೆ ಯುಎಇ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಅಂದು ಇಡೀ ರಾಷ್ಟ್ರದಲ್ಲಿ ರಜಾದಿನ ಇರಲಿದೆ. ಈ ವರ್ಷ 48ನೇ ಯುಎಇ ರಾಷ್ಟ್ರೀಯ ದಿನವಾಗಿದೆ. ಈ ದಿನ ವಾಹನವನ್ನು ನಿಗದಿ ಪಡಿಸಲಾದ ಪಾರ್ಕಿಂಗ್‌ ಟ್ರ್ಯಾಂಕ್‌ನಲ್ಲಿ ನಿಲ್ಲಿಸಿದರೆ ಹಣ ಪಾವತಿಸಬೇಕಾಗಿಲ್ಲ.

Advertisement

ಆದರೆ ನವೆಂಬರ್‌ ಕಡೆಯ ದಿನ 30ರಂದು ವಾಹನ ಪಾರ್ಕ್‌ ಮಾಡಿದರೆ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ದುಬೈ ರಸ್ತೆ ಮತ್ತು ಸಾರಿಗೆ ಇಲಾಖೆ ತಿಳಿಸಿದೆ.

ಏನೆಲ್ಲಾ ಬಂದ್‌ ಇರಲಿದೆ?

ಕಸ್ಟಮರ್ಸ್‌ ಹ್ಯಾಮಿನೆಸ್‌ ಸೆಂಟರ್‌ಗಳು, ಪಾವತಿ ಪಾರ್ಕಿಂಗ್‌ ಜಾಗಗಳು, ದುಬೈ ಮೆಟ್ರೋ ಸೇವೆ, ಪಬ್ಲಿಕ್‌ ಬಸ್‌ ಸೇವೆ (ದುಬೈ ಬಸ್‌), ಮೆಟ್ರೋ ಸಂಪರ್ಕಿಸುವ ಇತರ ಬಸ್‌ ಸೇವೆಗಳು, ವಾಟರ್‌ ಬಸ್‌ಗಳು ಸೇರಿದಂತೆ ಎಲ್ಲಾ ಕಚೇರಿಗಳು ಅಂದು ಬಂದ್‌ ಇರಲಿದೆ. ನವೆಂಬರ್‌ 30ರ ಮಧ್ಯರಾತ್ರಿ 11.59ರಿಂದ ಈ ಎಲ್ಲಾ ಸೇವೆಗಳು ಬಂದ್‌ ಇರಲಿದ್ದು, ಡಿಸೆಂಬರ್‌ 3ರ ಮಧ್ಯರಾತ್ರಿ 11.59ರ ವರೆಗೆ ಜಾರಿಯಲ್ಲಿರಲಿದೆ. ಅಂದು ನಗರಗಳ ಇತರ ಶಾಪಿಂಗ್‌ ಮಾಲ್‌ಗ‌ಳು, ಅಂಗಡಿ ಮುಂಗಟ್ಟುಗಳು ತೆರೆದಿರಲಿದ್ದು ಕುಟುಂಬದ ಸಮೇತ ಶಾಪಿಂಗ್‌ ಮಾಡುವವರು ಯಾವುದೇ ಪಾರ್ಕಿಂಗ್‌ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next