Advertisement

ಯುಎಇನಲ್ಲಿ ಇನ್ನು ಸೆನ್ಸಾರ್‌ ಫ್ರೀ; 21 ವರ್ಷ ಮೇಲ್ಪಟ್ಟವರಿಗೆ ವೀಕ್ಷಣೆಯ ಹೊಸ ವ್ಯವಸ್ಥೆ

09:59 AM Dec 21, 2021 | Team Udayavani |

ದುಬಾೖ: ತೀರಾ ಕಟ್ಟುನಿಟ್ಟಿನ ಸಾಂಸ್ಕೃತಿಕ ಚೌಕಟ್ಟು ಹೊಂದಿದ್ದ ಯುಇಎ ಈಗಾಗಲೇ ನಿಧಾನಕ್ಕೆ ಆಧುನಿಕ ಜಗತ್ತಿಗೆ ತೆರೆದುಕೊಳ್ಳಲಾರಂಭಿಸಿದೆ. ಹೊಸತಾಗಿ ಪ್ರಕಟ ಮಾಡಿರುವ ಕ್ರಮವೊಂದರಲ್ಲಿ ಸಿನೆಮಾ ಪ್ರಮಾಣೀಕರಣ ವ್ಯವಸ್ಥೆಯನ್ನೇ ರದ್ದು ಮಾಡಿದೆ. ಧಾರ್ಮಿಕ ನಂಬಿಕೆಗಳಿಗೆ ಅಡ್ಡಿ ಎಂಬ ಕಾರಣದಿಂದಾಗಿ ಅಲ್ಲಿ ಬಿಡುಗಡೆಯಾಗುತ್ತಿದ್ದ ಸಿನೆಮಾಗಳಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತಿತ್ತು. ಇನ್ನು ಮುಂದೆ ಅಂಥ ವ್ಯವಸ್ಥೆಯೇ ಇರುವುದಿಲ್ಲ. ಎಮಿರೇಟ್ಸ್‌ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ ಹೊಸ ತಾಗಿರುವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿ ತರಲಿದೆ.

Advertisement

ಅದರ ಅನ್ವಯ ಅಂತಾರಾಷ್ಟ್ರೀಯವಾಗಿ ವೀಕ್ಷಕರಿಗೆ ಅನ್ವಯವಾಗುವಂತೆ ಸಿನೆಮಾ ವೀಕ್ಷಣೆ ಮಾಡಿ 21 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ವೀಕ್ಷಿಸಲು ಅನುಕೂಲವಾಗುವಂತೆ ನಿಯಮದಲ್ಲಿ ಬದಲಾವಣೆ ಮಾಡಿದೆ. ಈ ಬಗ್ಗೆ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ಇದನ್ನೂ ಓದಿ:ಆಲಪ್ಪುಳ ಅವಳಿ ಕೊಲೆ ಪ್ರಕರಣ : ಪೊಲೀಸರಿಂದ ಇಬ್ಬರ ಬಂಧನ

ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಲಿದೆ. ಇತ್ತೀಚೆಗಷ್ಟೇ ವಿವಾಹಿತರಾಗದ ಜೋಡಿ ಜತೆಯಾಗಿ ವಾಸಿಸುವ ನಿಟ್ಟಿನಲ್ಲಿ ಕೂಡ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿತ್ತು. ಇಷ್ಟು ಮಾತ್ರವಲ್ಲದೆ, ಪಾಶ್ಚಿಮಾತ್ಯ ಶೈಲಿಯಲ್ಲಿ ಶನಿವಾರ ಮತ್ತು ರವಿವಾರಗಳನ್ನು ವಾರಾಂತ್ಯವೆಂದು ಪರಿಗಣಿಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಕೆಲಸ ಗಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next