Advertisement

ಬಿ.ಆರ್‌. ಶೆಟ್ಟಿ ಒಡೆತನದ ಫಿನಾಬ್ಲಿರ್‌ ಪಿಎಲ್‌ಸಿ ಸಂಸ್ಥೆ 73 ರೂ.ಗೆ ಮಾರಾಟ!

11:41 AM Dec 20, 2020 | sudhir |

ದುಬಾೖ: ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಖ್ಯಾತ ಉದ್ಯಮಿ ಬಿ.ಆರ್‌. ಶೆಟ್ಟಿ ಒಡೆತನದ
ಫಿನಾಬ್ಲಿರ್‌ ಪಿಎಲ್‌ಸಿ ಸಂಸ್ಥೆ ಕೇವಲ 1 ಡಾಲರ್‌ಗೆ (73.61 ರೂ.) ಮಾರಾಟವಾಗಿದೆ! ಇಸ್ರೇಲ್‌- ಯುಎಇ ಒಕ್ಕೂಟದ ಗ್ಲೋಬಲ್‌ ಫಿನ್‌ಟೆಕ್‌ ಇನ್‌ವೆಸ್ಟ್‌ಮೆಂಟ್ಸ್‌ ಹೋಲ್ಡಿಂಗ್‌ (ಜಿಎಫ್ಐಎಚ್‌) ಸಂಸ್ಥೆ ಫಿನಾ ಬ್ಲಿರ್‌ ಪಿಎಲ್‌ಸಿಯನ್ನು ಖರೀದಿಸಿದೆ.

Advertisement

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿ.ಆರ್‌. ಶೆಟ್ಟಿ ಅವರ ಸಂಸ್ಥೆಯ ಮೌಲ್ಯ 2 ಬಿ. ಡಾಲರ್‌ ಇತ್ತು. ಆದರೆ ಎಪ್ರಿಲ್‌ನ ವರದಿ ಯಂತೆ ಫಿನಾಬ್ಲಿರ್‌ 1 ಬಿ. ಡಾಲರ್‌ಗೂ ಅಧಿಕ ಸಾಲ ಹೊಂದಿದ್ದು, ಸಂಸ್ಥೆ ದಿವಾಳಿಯಾಗುವುದನ್ನು ತಪ್ಪಿ ಸಲು ಮಾರಾಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next