ನಿರ್ದೇಶಕ ಪವನ್‌ಕುಮಾರ್ ನಿರ್ದೇಶನದ “ಯು-ಟರ್ನ್’ ಚಿತ್ರ 2016 ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.ಹೊಸ ಬಗೆಯ ಪ್ರಯತ್ನವಾಗಿ ಮೆಚ್ಚುಗೆ ಗಳಿಸುವ ಜೊತೆಗೆ ಬೇರೆ ಬೇರೆ ಭಾಷೆಗಳಿಗೂ ರೀಮೇಕ್ ಆಗಿತ್ತು. ಅದರಲ್ಲಿ ಫಿಲಿಫೈನ್ಸ್ ಭಾಷೆಕೂಡಾ ಒಂದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಫಿಲಿಫೈನ್ಸ್ ಭಾಷೆಯಲ್ಲೂ “ಯು-ಟರ್ನ್’ ಎಂದೇ ತಯಾರಾಗಿರುವ ಈ ಚಿತ್ರ ಅಕ್ಟೋಬರ್ 30 ರಂದು ಬಿಡುಗಡೆಯಾಗಲಿದೆ.
ಸದ್ಯ ಆ ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾವಾಗಿ ತೆರೆಗೆ ಬಂದಿದ್ದ ಯು-ಟರ್ನ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ್, ರಾಧಿಕಾ ಚೇತನ್ ಪ್ರಮುಖ ಪಾತ್ರ ಮಾಡಿದ್ದರು.
ರಕ್ಷಿತ್ ಕಳ್ಕೊಂಡಿದ್ದು ಮತ್ತೆ ಸಿಕ್ತು! : ದಶಕದ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಕಿರುಚಿತ್ರವೊಂದು ಅರ್ಧಕ್ಕೆ ನಿಂತಿದ್ದು, ಈಗ ಮತ್ತೆ ಅದನ್ನು ಪೂರ್ಣಗೊಳಿಸುವ ಕಾರ್ಯಕ್ಕೆ ರಕ್ಷಿತ್ ಶೆಟ್ಟಿ ಚಾಲನೆ ನೀಡಿದ್ದಾರೆ. ಹೌದು, ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ “ಕನ್ಷೆಷನ್ ಆಫ್ ಡಸ್ಟ್‌ಬಿನ್’ ಚಿತ್ರದ ಫೂಟೇಜ್ ಕಳೆದು ಹೋಗಿತ್ತಂತೆ.ಆದರೆ ಈಗ ಸಿಕ್ಕಿದೆ.ಮತ್ತೆ ಕೆಲಸ ಆರಂಭವಾಗಿದೆ.
ಈಗ ರಕ್ಷಿತ್ ಶೆಟ್ಟಿ ಅದಕ್ಕೆ ಹೊಸರೂಪ ಕೊಟ್ಟು ತೆರೆಮೇಲೆ ತರುವ ತಯಾರಿ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿರುವ ರಕ್ಷಿತ್ ಶೆಟ್ಟಿ, “ಸುಮಾರು ಎಂಟು ವರ್ಷಗಳ ನಂತರ ಅಜನೀಶ್ ಲೋಕನಾಥ್ ಜೊತೆಗೆ “ಕನ್ಷೆಷನ್ ಆಫ್ ಡಸ್ಟ್‌ಬಿನ್’ ಗೆ ಕೆಲಸ ಮಾಡುತ್ತಿರುವುದು ತುಂಬ ಫನ್ ಆಗಿದೆ’ ಎಂದಿದ್ದಾರೆ.