Advertisement

ಸೋಂಕು ತಗಲಿಸಿಕೊಳ್ಳಲೆಂದೇ ವಿದ್ಯಾರ್ಥಿಗಳ ಪಾರ್ಟಿ ; ಏನಿದು ಅಮೆರಿಕಾದಲ್ಲೊಂದು ಹುಚ್ಚಾಟ?

09:29 PM Jul 03, 2020 | Sriram |

ಅಲಬಾಮ(ಅಮೆರಿಕ): ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಕಾಲೇಜು ವಿದ್ಯಾರ್ಥಿಗಳು ಕೋವಿಡ್-19 ಪಾರ್ಟಿಯನ್ನು ಮಾಡುತ್ತಿದ್ದಾರೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಿದ್ಯಾರ್ಥಿಗಳೆಲ್ಲಾ ಸೋಂಕು ತಗುಲಿಸಿಕೊಳ್ಳಲೆಂದೇ ಒಟ್ಟು ಸೇರಿ ಮಾಡುವ ಪಾರ್ಟಿ ಇದು. ಅಲಬಾಮಾದ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೋವಿಡ್ ಸೋಂಕಿತನನ್ನು ಈ ಪಾರ್ಟಿಗೆ ಆಹ್ವಾನಿಸಲಾಗುವುದು. ಪಾರ್ಟಿಯಲ್ಲಿ ಒಂದು ಹೂಜಿಲ್ಲಿ ಹಣ ಸಂಗ್ರಹಿಸಲಾಗುವುದು.

ಯಾರು ಮೊದಲು ಕೋವಿಡ್ ಸೋಂಕಿಗೆ ಒಳಗಾಗುತ್ತಾರೊ ಆ ಹಣವನ್ನು ಅವರಿಗೆ ನೀಡಲಾಗುವುದು ಎಂದು ಟುಸ್ಕಲೂಸ ನಗರದ ಕೌನ್ಸಿಲರ್‌ ಹೇಳಿದ್ದಾರೆ.

ಮೊದಲಿಗೆ ನಾವು ಈ ಸುದ್ದಿಯನ್ನು ವದಂತಿ ಎಂದೇ ಭಾವಿಸಿದ್ದವು. ಆದರೆ ತನಿಖೆಯಲ್ಲಿ ಈ ರೀತಿಯ ಪಾರ್ಟಿ ನಡೆಯುತ್ತಿರುವುದು ದೃಢವಾಯಿತು.

Advertisement

ಈ ರೀತಿಯ ಪಾರ್ಟಿಗಳನ್ನು ಆಯೋಜಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next