Advertisement

ಪ್ರೊ ಕಬಡ್ಡಿ: ತಮಿಳ್‌ ತಲೈವಾಸ್‌ ಮೇಲೆ ಯು ಮುಂಬಾ ಸವಾರಿ

11:50 PM Oct 14, 2022 | Team Udayavani |

ಬೆಂಗಳೂರು: ಒಂದು ದಿನದ ವಿರಾಮದ ಬಳಿಕ ಮೊದಲ್ಗೊಂಡ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ಯು ಮುಂಬಾ ಪಡೆ ತಮಿಳ್‌ ತಲೈವಾಸ್‌ ಮೇಲೆ ಸವಾರಿ ಮಾಡಿದೆ. 39-32 ಅಂತರದಿಂದ ಮಣಿಸಿ ತನ್ನ ಎರಡನೇ ಗೆಲುವನ್ನು ಸಾಧಿಸಿದೆ.

Advertisement

ಇನ್ನೊಂದೆಡೆ ತಲೈವಾಸ್‌ ತಂಡ ಗೆಲುವಿನ ಖಾತೆ ತೆರೆಯಲು ವಿಫ‌ಲವಾಯಿತು. 3 ಪಂದ್ಯಗಳಲ್ಲಿ ಎದುರಾದ ಎರಡನೇ ಸೋಲು ಇದಾಗಿದೆ. ಒಂದು ಪಂದ್ಯ ಟೈ ಆಗಿದೆ.

ಮುಂಬಾ ಪರ ರೈಡರ್‌ಗಳಾದ ಗುಮಾನ್‌ ಸಿಂಗ್‌ ಸರ್ವಾಧಿಕ 12 ಅಂಕ, ಆಶಿಷ್‌ 10 ಅಂಕ, ಜೈ ಭಗವಾನ್‌ 8 ಅಂಕ ತಂದಿತ್ತರು. ತಲೈವಾಸ್‌ಗೆ ಪವನ್‌ ಸೆಹ್ರಾವತ್‌ ಗೈರು ದುಬಾರಿಯಾಗಿ ಕಾಡಿತು. ರೈಡರ್‌ ನರೇಂದರ್‌ ಏಕಾಂಗಿ ಹೋರಾಟ ನಡೆಸಿ 15 ಅಂಕ ಗಳಿಸಿ ಕೊಟ್ಟರು.

ಜೈಪುರ್‌ ಭರ್ಜರಿ ಜಯ
ದಿನದ ದ್ವಿತೀಯ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 44-31 ಅಂಕಗಳಿಂದ ಹರ್ಯಾಣ ಸ್ಟೀಲರ್ಗೆ ಸೋಲುಣಿಸಿತು. ಇದು ಜೈಪುರಕ್ಕೆ ಒಲಿದ ಎರಡನೇ ಜಯ. ಇನ್ನೊಂದೆಡೆ ಹರ್ಯಾಣ ಹ್ಯಾಟ್ರಿಕ್‌ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು.

ವಿಜೇತ ತಂಡದ ಪರ ರೈಡರ್‌ ಅರ್ಜುನ್‌ ದೇಶ್ವಾಲ್‌ ಅಮೋಘ ಪ್ರದರ್ಶನವಿತ್ತರು. ಅವರೊಬ್ಬರೇ 14 ಅಂಕ ಸಂಪಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next