Advertisement

ನೆರೆ ಪ್ರದೇಶಗಳಿಗೆ ಹಠಾತ್ ಭೇಟಿ ನೀಡಿದ ಉ.ಕನ್ನಡ ಜಿಲ್ಲಾಧಿಕಾರಿ: ಆಡಳಿತ ಯಂತ್ರದ ಪರಿಶೀಲನೆ

07:09 PM Jul 29, 2023 | Team Udayavani |

ಕಾರವಾರ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಶನಿವಾರ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಕೆಲ ಗ್ರಾಮಗಳಿಗೆ ಹಠಾತ್ ಭೇಟಿ ನೀಡಿ ಆಡಳಿತ ಯಂತ್ರದ ಕ್ರಿಯಾಶೀಲತೆ ಪರಿಶೀಲಿಸಿದರು. ನೆರೆ ಪೀಡಿರ ಗ್ರಾಮಗಳ ವೀಕ್ಷಣೆಯಲ್ಲಿ   ಜಿಲ್ಲಾಧಿಕಾರಿಗಳು ಸರ್ಕಾರದಿಂದ ಕೈಕೊಂಡ ರಸ್ತೆ, ಕುಡಿಯುವ ನೀರು, ಸೇತುವೆ ಮುಂತಾದ ಕಾಮಗಾರಿಗಳನ್ನು ಪರಿಶೀಲಿಸಿದರು.

Advertisement

ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಗ್ರಾಮ ಒನ್ ಕೇಂದ್ರಕ್ಕೆ ಬಂದಂತಹ ಫಲನುಭವಿಗಳೊಂದಿಗೆ, ಗ್ರಾಮ ಒನ್ ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಚರ್ಚಿಸಿದರು ಹಾಗೂ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಫಲನುಭವಿಗಳಿಗೆ ತಿಳಿಸಿದರು. ತಾಲೂಕಿನ  ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ತೆರಳಿ ವಿದ್ಯಾರ್ಥಿ ನಿಲಯಗಳಲ್ಲಿ   ಅಗತ್ಯ ಮೂಲಭೂತ ಸೌಲಭ್ಯ ನೀಡಲಾಗಿದೆಯೇ ಎಂಬುವುದನ್ನು ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಒಂದು ವೇಳೆ ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳಿದ್ದಲ್ಲಿ ನೇರವಾಗಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಸ್ತಿಕೇರಿ, ಗುಂಡಬಾಳಕ್ಕೆ ಭೇಟಿ: ಹೊನ್ನಾವರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಬಸ್ತಿಕೇರಿ ಹಾಗೂ ಗುಂಡಬಾಳ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಪ್ರವಾಹ ಸಂತ್ರಸ್ತರೊಂದಿಗೆ ಚರ್ಚಿಸಿ , ಅವರುಗಳಿಗೆ ಸಾಂತ್ವನ ಹೇಳಿದರು ಹಾಗೂ ಪ್ರವಾಹದಿಂದ ಆಗಿರುವ ಹಾನಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು .

ಮಳೆಗಾಲ ಇನ್ನೂ ಇದೆ. ಯಾವುದೇ ಸಮಯದಲ್ಲೂ ಸಮಸ್ಯೆಗಳಾಗಬಹುದು. ಈಗಲೇ ಎಚ್ಚತ್ತು ಕೊಂಡರೆ ಮುಂದೆ ಆಗಬಹುದಾದಂತ ದುರಂತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು. ಸಂಬಂಧ ಪಟ್ಟ ತಂಡವು ಇಲ್ಲೇ ಇದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next