ಜಾರ್ಜ್‌ಟೌನ್ (ಗಯಾನಾ): ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಉದ್ಘಾಟನಾ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದೆ.
ಆಸ್ಟ್ರೇಲಿಯ ಎದುರಿನ ಮುಖಾಮುಖಿಯನ್ನು ಅದು 6 ವಿಕೆಟ್‌ಗಳಿಂದ ಕಳೆದುಕೊಂಡಿತು. ದಿನದ ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾ 40 ರನ್ನುಗಳಿಂದ ಸ್ಕಾಟ್ಲೆಂಡ್‌ಗೆ ಸೋಲುಣಿಸಿತು.
ಆಸ್ಟ್ರೇಲಿಯ ಘಾತಕ ಬೌಲಿಂಗ್ ದಾಳಿ ಸಂಘಟಿಸಿ ವೆಸ್ಟ್ ಇಂಡೀಸನ್ನು ಕಟ್ಟಿಹಾಕಿತು. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 40.1 ಓವರ್‌ಗಳಲ್ಲಿ 169ಕ್ಕೆ ಕುಸಿದರೆ, ಆಸೀಸ್ 44.5 ಓವರ್‌ಗಳಲ್ಲಿ 4 ವಿಕೆಟಿಗೆ 170 ರನ್ ಬಾರಿಸಿ ಗೆದ್ದು ಬಂದಿತು.
ಭಾರತೀಯ ಮೂಲದ ಎನ್. ರಾಧಾಕೃಷ್ಣನ್ ಸೇರಿ ಆಸ್ಟ್ರೇಲಿಯದ ಮೂವರು ಬೌಲರ್ ತಲಾ 3 ವಿಕೆಟ್ ಕೆಡವಿದರು.
Related Articles
ಲಿಯನಗೆ, ವೆಲ್ಲಲಗೆ ಜಯದ ನಗೆ
ಶ್ರೀಲಂಕಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸಕುನ ಲಿಯನಗೆ (85) ಮತ್ತು ನಾಯಕ ದುನಿತ್ ವೆಲ್ಲಲಗೆ (27ಕ್ಕೆ 5).
ಮೊದಲು ಬ್ಯಾಟಿಂಗ್ ಮಾಡಿದ ಲಂಕೆಯನ್ನು 45.2 ಓವರ್‌ಗಳಲ್ಲಿ 218ಕ್ಕೆ ನಿಯಂತ್ರಿಸಿದ್ದು ಸ್ಕಾಟ್ಲೆಂಡ್ ಹೆಗ್ಗಳಿಕೆ. ಆದರೆ ಈ ಸಾಮಾನ್ಯ ಮೊತ್ತವನ್ನು ಬೆನ್ನಟ್ಟುವಲ್ಲಿ ಚಾರ್ಲಿ ಟಿಯರ್ ಪಡೆ ವಿಫಲವಾಯಿತು. 48.4 ಓವರ್‌ಗಳಲ್ಲಿ 178ಕ್ಕೆ ಕುಸಿಯಿತು. ಸ್ಕಾಟ್ಲೆಂಡ್ ಪರ ಜಾಕ್ ಜಾರ್ವಿಸ್ 55 ರನ್ ಹೊಡೆದರು.