Advertisement
ಮಳೆ ಮತ್ತಿತರ ಸಂದರ್ಭಗಳಲ್ಲಿ ವಾಹನಗಳ ಸುಗಮ ಚಾಲನೆ ಸಾಧ್ಯವಾಗದ ಕಾರಣ ಅಪಘಾತಗಳು ಸಂಭವಿಸುವ ಹಿನ್ನೆಲೆಯಲ್ಲಿ ಟೈರುಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೂರು ಗುಣಮಟ್ಟಗಳನ್ನು ನಿಗದಿಗೊಳಿಸಿ ಸಚಿವಾಲಯ ಆದೇಶ ಹೊರಡಿಸಿದೆ. ಚಕ್ರಗಳ ತಿರುಗುವ ಸಾಮರ್ಥ್ಯ ಚೆನ್ನಾಗಿರಬೇಕು, ಒದ್ದೆಯಾಗಿರುವಾಗಲೂ ಹಿಡಿತ ಚೆನ್ನಾಗಿರಬೇಕು, ತಿರುಗುವಾಗ ಶಬ್ದ ಕಡಿಮೆಯಿರಬೇಕು ಎಂದು ಸೂಚಿಸಿದೆ.
ಟೈರ್‌ಗಳು ಹೆಚ್ಚೆಚ್ಚು ತಿರುಗುವ ಸಾಮರ್ಥ್ಯ ಪಡೆದಾಗ ಇಂಧನ ಉಳಿತಾಯವಾಗುತ್ತದೆ. ಅದಕ್ಕಾಗಿ ಎಂಜಿನ್ ಹೆಚ್ಚಿನ ಇಂಧನ ಬಳಸುವುದನ್ನು ತಡೆಯಬಹುದು. ಒದ್ದೆಯಾದಾಗಲೂ ಟೈರ್‌ಗಳು ಉತ್ತಮ ಹಿಡಿತವನ್ನು ಹೊಂದಿದ್ದರೆ ಬ್ರೇಕ್ ಸಾಮರ್ಥ್ಯ ವೃದ್ಧಿಸುತ್ತದೆ, ಸುರಕ್ಷತೆಯೂ ಉತ್ತಮಗೊಳ್ಳುತ್ತದೆ. ಟೈರ್‌ಗಳು ಕಡಿಮೆ ಶಬ್ದ ಉಂಟು ಮಾಡುವಂತೆ ಬದಲಾದರೆ, ರಸ್ತೆಗಳಲ್ಲಿ ಶಬ್ದದ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಚಿವಾಲಯ ತಿಳಿಸಿದೆ.