Advertisement

ಬಗೆ ಬಗೆ ಸ್ಕರ್ಟುಗಳು

02:31 PM Jan 12, 2018 | |

ಫ್ಯಾಷನ್‌ ಜಗತ್ತು ಒಂದು ರೀತಿಯ ಬದಲಾವಣೆಯ ಲೋಕ. ಹಾಗಾಗಿ ಇಲ್ಲಿ ಕೆಲವೊಮ್ಮೆ ತೀರಾ ಹಳೆಯ ಫ್ಯಾಷನ್ನುಗಳು ಮರುಕಳಿಸುತ್ತವೆ, ಹೊಸ ರೂಪ ಪಡೆಯುತ್ತವೆ, ಹೊಸಹೊಸ ವಿನ್ಯಾಸಗಳ ಆವಿಷ್ಕಾರಗಳೂ ನಡೆದು ತಯಾರಿಸಲ್ಪಟ್ಟು ಮಾರುಕಟ್ಟೆಗೆ ಬರುತ್ತವೆ; ಮತ್ತೆ ಬದಲಾಗುತ್ತವೆ. ಮತ್ತೆ ಹೊಸತೊಂದಕ್ಕೆ ಕಾಯುತ್ತಿರುತ್ತದೆ. ಹಿಂದಿನ ವಾರ ಕೆಲವಷ್ಟು ಬಗೆಯ ಸ್ಕರ್ಟುಗಳನ್ನು ನಾವು ನೋಡಿದ್ದೇವೆ. ಅದರ ಮುಂದುವರಿದ ಭಾಗವು ಇಲ್ಲಿದೆ. ಸ್ಕರ್ಟ್‌ಪ್ರಿಯರಿಗಾಗಿಯೇ ಇನ್ನೂ ಕೆಲವು ಹೊಸ ಬಗೆಯ ಸ್ಕರ್ಟಗಳನ್ನು ಇಲ್ಲಿ ಹೇಳಲಾಗಿದೆ.

Advertisement

1 ಪ್ಲೇಟೆಡ್‌ ಸ್ಕರ್ಟ್ಸ್: ಇವುಗಳು ಸ್ಟ್ರೈಟ್ ಕಟ್ ಅನ್ನು ಹೊಂದಿದ್ದು ವೆಸ್ಟ್ನಲ್ಲಿ ವರ್ಟಿಕಲ್ ಪ್ಲೇಟುಗಳನ್ನು (ನೆರಿಗೆಗಳನ್ನು) ಹೊಂದಿರುತ್ತವೆ. ಕ್ರಾಪ್‌ ಟಾಪುಗಳೊಂದಿಗೆ ಈ ಬಗೆಯ ಸ್ಕರ್ಟುಗಳು ಬಹಳ ಚೆನ್ನಾಗಿ ಮ್ಯಾಚ್‌ ಆಗುತ್ತವೆ. ಈ ಬಗೆಯ ಸ್ಕರ್ಟುಗಳು ಇತ್ತೀಚಿಗಿನ ಟ್ರೆಂಡಿ ಫ್ಯಾಷನ್‌ ಎನಿಸಿವೆ. ಇವು ಸ್ಯಾಟಿನ್‌, ಸಿಲ್ಕ್, ಆರ್ಟಿಫಿಶಿಯಲ್ ಸಿಲ್ಕ್ ಇನ್ನಿತರೆ ಬಟ್ಟೆಗಳಲ್ಲಿ ದೊರೆಯುತ್ತವೆ. ಬಗೆ ಬಗೆಯ ಡಿಸೈನುಗಳಲ್ಲಿ ದೊರೆಯುವುದರಿಂದ ಆಯ್ಕೆಗೆ ವಿಫ‌ುಲ ಅವಕಾಶಗಳಿರುತ್ತವೆ. ಪಾರ್ಟಿವೇರ್‌ ಮತ್ತು ವಿಶೇಷ ಸಂದರ್ಭಗಳಲ್ಲಿ ಧರಿಸಬಹುದಾದ ಸ್ಕರ್ಟುಗಳಾಗಿದ್ದು ಇವುಗಳು ಇಂಡೋ ವೆಸ್ಟರ್ನ್ ಫ್ಯೂಷನ್‌ ಲುಕ್ಕನ್ನು ನೀಡುತ್ತವೆ.

2 ಸರಾಂಗ್‌ ಸ್ಕರ್ಟ್ಸ್: ಇವುಗಳು ರಾಪ್‌ ಅರೌಂಡ್‌ ಸ್ಕರ್ಟುಗಳಾಗಿದ್ದು ವೆಸ್ಟಿನಲ್ಲಿ ಸುತ್ತಿಕೊಂಡು ಸೈಡಿನಲ್ಲಿ ನಾಟ್ ಅನ್ನು ಹಾಕುವುದರ ಮೂಲಕ ಸ್ಕರ್ಟುಗಳ ಲುಕ್ಕನ್ನು ನೀಡುತ್ತವೆ. ಧರಿಸಲು ಬಹಳ ಆರಾಮದಾಯಕವಾಗಿರುವ ಈ ಸ್ಕರ್ಟುಗಳು ಕ್ಯಾಷುವಲ್ ವೇರಾಗಿ ಬಳಸಲು ಹೆಚ್ಚು ಸೂಕ್ತವೆನಿಸುತ್ತವೆ. ಕಾಟನ್‌ ಸರಂಗ್‌ ಸ್ಕರ್ಟುಗಳು ಸಾಮಾನ್ಯವಾಗಿ ಲಭಿಸುವಂತಹ ಬಗೆಗಳಾಗಿವೆ.

3ಸ್ಟ್ರೈಟ್ ಸ್ಕರ್ಟ್ಸ್: ಸ್ಟ್ರೈಟ್ ಕಟ್ನಿಂದ ತಯಾರಿಸಲಾಗುವ ಸ್ಕರ್ಟುಗಳಿವಾಗಿದ್ದು ವೆಸ್ಟ್ ಮತ್ತು ಹಪ್‌ಗ್ಳಲ್ಲಿ ಫಿಟ್ಟಿಂಗ್‌ ಇದ್ದು ನೀ ಬಳಿ ಸಡಿಲವಾಗಿರುತ್ತವೆ. ಪೆನ್ಸಿಲ್ ಸ್ಕರ್ಟುಗಳಂತೆಯೇ ಕಾಣುವ ಈ ಸ್ಕರ್ಟುಗಳು ಅವುಗಳಷ್ಟು ಫಿಟೆ°ಸ್‌ ಇರುವುದಿಲ್ಲ. ಬದಲಾಗಿ ಧರಿಸಲು ಮತ್ತು ಸಂಭಾಳಿಸಲು ಸುಲಭದಾಯಕವಾಗಿರುತ್ತವೆ.
 
4 ಟ್ಯೂಬ್ ಸ್ಕರ್ಟ್ಸ್: ಇವುಗಳು ಪೆನ್ಸಿಲ್ ಸ್ಕರ್ಟುಗಳಿಗೆ ಹೋಲುವಂತಹುದಾಗಿದೆ. ಇವುಗಳು ಸ್ಟ್ರೆಚೇಬಲ್ ಬಟ್ಟೆಗಳಿಂದ ತಯಾರಿಸಲಾಗಿರುತ್ತವೆ. 
  
5ಜೀನ್ಸ್ ಸ್ಕರ್ಟ್ಸ್: ಜೀನ್ಸ್ ಪ್ಯಾಂಟುಗಳಂತೆಯೇ ಜೀನ್ಸ್ ಸ್ಕರ್ಟುಗಳು ದೊರೆಯುತ್ತವೆ. ಇವುಗಳೊಂದಿಗೆ ಮಾಡರ್ನ್ ಟಾಪುಗಳು ಬಹಳ ಚೆನ್ನಾಗಿ ಕಾಣುತ್ತವೆ. ಇವುಗಳು ನೀ ಲೆನ್ಸ್, ಆ್ಯಂಕಲ್ ಲೆನ್ಸ್ ಮತ್ತು ಮಿನಿ ಮೂರು ಬಗೆಗಳಲ್ಲಿ ಮತ್ತು ಹಲವು ಶೇರುಗಳಲ್ಲಿಯೂ ದೊರೆಯುತ್ತವೆ. ಬ್ಲೂ ಶೇಡೆಡ್‌ ಜೀನ್ಸ್ ಸ್ಕರ್ಟುಗಳೊಂದಿಗೆ ಬಿಳಿಯ ಬಣ್ಣದ ಟಾಪುಗಳು ಒಪ್ಪುತ್ತವೆ.

ಈ ಮೇಲಿನವು ಸ್ಕರ್ಟುಗಳ ವಿಧಗಳಾದರೆ ನಮ್ಮ ಬಾಡಿ ಶೇಪಿನ ಆಧಾರದ ಮೇಲೆ ಸೂಕ್ತವಾದ ವಿಧದ ಸ್ಕರ್ಟುಗಳ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಆವಶ್ಯಕವಾದುದಾಗಿದೆ. ನಾವು ಧರಿಸುವಂತಹ ಸ್ಕರ್ಟುಗಳು ನಮ್ಮ ಸೌಂದರ್ಯವನ್ನು ಕಾಂಪ್ಲಿಮೆಂಟ… ಮಾಡುವಂತಿರಬೇಕು. ಈ ನಿಟ್ಟಿನಲ್ಲಿ ಉಪಯುಕ್ತವಾಗುವಂತಹ ಕೆಲವು ಅಂಶಗಳನ್ನು ಕೆಳಗೆ ನೀಡಲಾಗಿದೆ.

Advertisement

.ನಮ್ಮ ದೇಹದ ಶೇಪಿಗೆ ಅನುಗುಣವಾದ ವಿಧದ ಸ್ಕರ್ಟನ್ನು ಆಯ್ದುಕೊಳ್ಳುವುದು ಉತ್ತಮ.

.ದಪ್ಪಗಿನ ಮೈ ಕಟ್ಟನ್ನು ಹೊಂದಿದವರು ಸರ್ಕಲ್ ಸ್ಕರ್ಟ್‌  ಅಥವಾ ಪ್ಲೇಟೆಡ್‌ ಸ್ಕರ್ಟನ್ನು ಬಳಸುವುದು ಒಳಿತು. ಆದಷ್ಟು ವೇಸ್ಟ್ನಲ್ಲಿ ಫಿಟ್ ಇರುವಂತಹ ಸ್ಕರ್ಟುಗಳನ್ನು ಬಳಸದಿರುವುದು ಉಚಿತವೆನಿಸುತ್ತವೆ.

.ಎತ್ತರದವರು ನೀ-ಲೆನ್‌¤ ಸ್ಕರ್ಟುಗಳನ್ನು ಆಯ್ಕೆ ಮಾಡುವುದು ಸೂಕ್ತವಾದುದು.

.ಹಾಗೆಯೇ ಕಡಿಮೆ ಎತ್ತರವನ್ನು ಹೊಂದಿದವರು ಲಾಂಗ್‌ ಸ್ಕರ್ಟುಗಳನ್ನು ಹಾಕಿ ಅವುಗಳೊಂದಿಗೆ ಹೀಲ್ಸ… ಅನ್ನು ತೊಡುವುದರಿಂದ ಇರುವುದಕ್ಕಿಂತ ಹೆಚ್ಚಿನ ಟಾಲೆ°ಸ್‌ ಬರುತ್ತದೆ.

.ಸಂದರ್ಭಕ್ಕೆ ತಕ್ಕಂತಹ ಡಿಸೈನಿನ ಸ್ಕರ್ಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

.ಸ್ಕರ್ಟುಗಳೊಂದಿಗೆ ಅವುಗಳಿಗೆ ಹೊಂದುವಂತಹಾ ಟಾಪುಗಳ ಆಯ್ಕೆ ಅತ್ಯಂತ ಮುಖ್ಯವಾದುದು. ಮಾಡರ್ನ್ ಮಾದರಿಯ ಸ್ಕರ್ಟುಗಳೊಂದಿಗೆ ಮಾಡರ್ನ್ ಲುಕ್ಕಿರುವ ಕೇಪ್‌ ಟಾಪ್‌ಗ್ಳು, ಆಫ್ ಶೋಲ್ಡರ್‌ ಟಾಪುಗಳು, ಬಬ್ಲಿ ಟಾಪುಗಳು ಫಾರ್ಮಲ್ ಟಾಪುಗಳನ್ನು ಬಳಸುವುದು ಹೆಚ್ಚು ಸೂಕ್ತ. ಅಂತೆಯೇ ಫ್ಯೂಷನ್‌ ಸ್ಕರ್ಟುಗಳೊಂದಿಗೆ ಬಗೆ ಬಗೆಯ ಕ್ರಾಪ್‌ ಟಾಪುಗಳನ್ನು ಧರಿಸಿದಾಗ ಸ್ಕರ್ಟುಗಳ ಅಂದ ಇಮ್ಮಡಿಗೊಳ್ಳುತ್ತದೆ. 

.ಕ್ಯಾಷುವಲ್ ಸ್ಕರ್ಟುಗಳೊಂದಿಗೆ ಧರಿಸುವ ಆಭರಣಗಳ ಮೇಲೆಯೂ ನಿಗಾ ವಹಿಸುವುದು ಅತ್ಯಾವಶ್ಯಕ. ಟ್ರೈಬಲ್ ಮಾದರಿಯ ಆಭರಣಗಳು, ಮೆಟಲ್ ಆಭರಣಗಳು, ಫ್ಯೂಷನ್‌  ಆಂಟಿಕ್‌ ಲುಕ್ಕಿನ ಕಿವಿಯಾಭರಣಗಳು, ಕುತ್ತಿಗೆಯ ಆಭರಣಗಳು ಮತ್ತು ಕೈ ಆಭರಣಗಳು ಚೆನ್ನಾಗಿ ಹೊಂದುತ್ತವೆ.

.ಸ್ಕರ್ಟುಗಳೊಂದಿಗೆ ಸ್ಟೈಲಿಶ್‌ ಲುಕನ್ನು ಪಡೆಯಲು ಮಾರುಕಟ್ಟೆಯಲ್ಲಿ ವಿಧ ವಿಧವಾದ ಸ್ಟೋಲುಗಳು ದೊರೆಯುತ್ತವೆ. ಅವುಗಳನ್ನು ಬಳಸಿ ಸುಂದರವಾಗಿ ಕಾಣಬಹುದು. ಈ ಸ್ಟೋಲುಗಳು ಹಲವು ಬಗೆಗಳಲ್ಲಿ ದೊರೆಯುತ್ತವೆ. ಮಾಡರ್ನ್ ಸ್ಕರ್ಟುಗಳೊಂದಿಗೆ ಶಿಫಾನ್‌ ಪ್ರಿಂಟೆಡ್‌ ಅಥವಾ ಪ್ಲೆ„ನ್‌ ಸಿಂಪಲ್ ಸ್ಟೋಲುಗಳು ಸಾತ್‌ ನೀಡಿದರೆ, ಹೆವಿ ಡಿಸೈನಿರುವ ಸ್ಕರ್ಟುಗಳೊಂದಿಗೆ ಥೆಡ್‌ ವರ್ಕ್‌ ಇರುವ ಅಥವಾ ಹೆವಿ ಡಿಸೈನುಗಳಿರುವ ಸ್ಟೋಲುಗಳು ನಿಮ್ಮ ಹೊಸದಾದ ಸ್ಟೈಲ್ ಸ್ಟೇಟೆಟಿಗೆ ರೂವಾರಿಯಾಗುತ್ತವೆ. ಫಾರ್ಮಲ್ ಸ್ಕರ್ಟುಗಳೊಂದಿಗೆ ಲಾಂಗ್‌ ಬ್ಯಾಗುಗಳು ಸಕ್ಕತ್ತಾದ ಲುಕ್ಕನ್ನು ನೀಡುತ್ತವೆ.

.ಇನ್ನು  ಬೋಟ್ ನೆಕ್ಡ್ ಕ್ರಾಪ್‌ ಟಾಪ್‌ ಮತ್ತು  ಲಾಂಗ್‌ ಸ್ಕರ್ಟುಗಳನ್ನು ಧರಿಸಿದಾಗ ಅವಗಳೊಂದಿಗೆ ಕಿವಿಯಾಭರಣಕ್ಕೆ ಮತ್ತು ಮೂಗಿನ ಆಭರಣಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ಕುತ್ತಿಗೆಗೆ ಕಡಿಮೆ ಆಭರಣವನ್ನು  ಧರಿಸುವುದು ಸದ್ಯದ ಟ್ರೆಂಡಿ ಫ್ಯಾಷನ್‌ ಎನಿಸಿದೆ. ಈ ಬಗೆಯ ಅಲಂಕಾರದಿಂದ ನಿಮ್ಮ ದಿರಿಸಿಗೆ ಇಂಡೋ ವೆಸ್ಟರ್ನ್ ಫ್ಯೂಷನ್‌ ಲುಕ್ಕನ್ನು ನೀಡಿದಂತಾಗುತ್ತದೆ. ಇವು ನಿಮ್ಮ ಸಾಧಾರಣ ಡ್ರೆಸ್ಸನ್ನೂ ಕೂಡ ಡಿಸೈನರ್‌ ಡ್ರೆಸ್ಸನ್ನಾಗಿ ಪರಿವರ್ತಿಸುತ್ತವೆ.  

ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next