Advertisement
ಮನುಷ್ಯರ ವಿಚಾರದಲ್ಲಿ “ಛೇ’ ಎಂದು ಹೇಳಿಬಿಡುವುದಾದರೂ, ಪ್ರಾಣಿಗಳ ಲೆಕ್ಕಾಚಾರಕ್ಕೆ ಬಂದರೆ ಅಸಾಧ್ಯ ಎಂದು ಹೇಳುವುದು ಕಷ್ಟ. ಹೌದು, ಇಂಥ ಒಂದು ಸಂದಿಗ್ಧ ಪರಿಸ್ಥಿತಿ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಎದುರಾಗಿದೆ. ಸದ್ಯ ಇಲ್ಲಿರೋದು ಆರ್ಯ (14) ಮತ್ತು ಮಾನ್ಯ (5) ಎಂಬ ಸಿಂಹಗಳು. ಇವು ಸಂಬಂಧದಲ್ಲಿ ಅಪ್ಪ-ಮಗಳು. ಹೀಗಾಗಿಯೇ ಏನೋ ಇವೆರಡು ಜೋಡಿಯಾಗುತ್ತಲೂ ಇಲ್ಲ. ಅಲ್ಲದೆ ಸಹಜವಾಗಿ ಇರಬೇಕಾದ ಲೈಂಗಿಕ ಆಸಕ್ತಿಯೂ ಇಲ್ಲ ಎಂಬುದು ಇಲ್ಲಿನ ಅಧಿಕಾರಿಗಳ ಅಭಿಪ್ರಾಯ.
ಹಳೇ ಕಥೆ: ಮೈಸೂರು ಮೃಗಾಲಯದಿಂದ ಮಾಲಿನಿ, ಆರ್ಯ ಎಂಬ ಎರಡು ಸಿಂಹಗಳನ್ನು ತ್ಯಾವರೆಕೊಪ್ಪ ಧಾಮಕ್ಕೆ ತರಲಾಗಿತ್ತು. ಇವುಗಳಿಗೆ ಹುಟ್ಟಿದ್ದೇ ಮಾನ್ಯ. ಆ ಬಳಿಕ ಮಾಲಿನಿ ಮೃತಪಟ್ಟಿತು. ಇದೀಗ ಆರ್ಯನಿಗೆ ಮಗಳು ಮತ್ತು ಸಂಗಾತಿ ಎರಡೂ ಮಾನ್ಯಳೇ ಆಗಿದ್ದಾಳೆ. ಸುಮಾರು ಐದೂವರೆ ವರ್ಷದಿಂದ ಒಟ್ಟಿಗೇ ಇವೆ. ಮಾನ್ಯ ಬೆದೆಗೆ ಬಂದ ಬಳಿಕ ಇವುಗಳ ಮಧ್ಯೆ ನೈಸರ್ಗಿಕ ಕ್ರಿಯೆ ನಡೆದಿದೆ ಎನ್ನುತ್ತಾರೆ ಸಿಂಹಧಾಮದ ಅಧಿಕಾರಿಗಳು. ಆದರೆ ಯಾವ ಪ್ರಮಾಣದಲ್ಲಿ ಕೂಡಬೇಕೋ ಆ ಪ್ರಮಾಣದಲ್ಲಿ ಕೂಡುತ್ತಿಲ್ಲ. ಇದಕ್ಕೆ ವಯಸ್ಸಿನ ಅಂತರ ಕಾರಣವೋ ಅಥವಾ ಬೇರೆ ನೈಸರ್ಗಿಕ ಕಾರಣವೋ ಗೊತ್ತಿಲ್ಲ ಎನ್ನುತ್ತಾರೆ. ಬಯಲು ಬಂದೀಖಾನೆಯಂತಹ ಆವರಣದಲ್ಲಿ ಸಿಂಹಗಳಿಗೆ ಸಂತಾನಾಭಿವೃದ್ಧಿಯ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ಆದರೆ ಇಲ್ಲಿ ನಿಖರವಾದ ಕಾರಣ ಏನೆಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್‌ಒ ಚಲುವರಾಜ್.
Related Articles
Advertisement
ಇದೀಗ ಅಂತಹ ಪ್ರಯತ್ನದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಈಗಾಗಲೇ ಬನ್ನೇರುಘಟ್ಟ ಮೃಗಾಲಯದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹವನ್ನು ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ. ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿದ ಬಳಿಕ ಈ ಪ್ರಸ್ತಾವನೆಗೆ ಜೀವ ಬರಲಿದೆ.
ಇವು ಬಂದರೆ ಒಂದೇ ಬಾರಿಗೆ ಎರಡು ಹೆಣ್ಣು ಸಿಂಹಗಳು ಕೂಡ ಬಸುರಿ ಸಂಭ್ರಮ ಅನುಭವಿಸಬಹುದೆಂಬ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಸಿಂಹಗಳಲ್ಲಿ ಬೆದೆಗೆ ಬಂದ ವೇಳೆಯಲ್ಲಿ ದಿನನಿತ್ಯ 30-40 ಬಾರಿಯಾದರೂ ಗಂಡು-ಹೆಣ್ಣು ಸೇರಬೇಕು. ಆದರೆ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಇದಾಗುತ್ತಿಲ್ಲ. ಇಲ್ಲಿರುವ ಗಂಡು ಸಿಂಹಕ್ಕೆ ಸುಮಾರು 14 ವರ್ಷ. ಹೆಣ್ಣು ಸಿಂಹಕ್ಕೆ 5 ವರ್ಷ. ಇದು ಇವೆರಡರಲ್ಲಿ ಪರಸ್ಪರ ಆಸಕ್ತಿ ಮೂಡಿಸದೇ ಇರುವಲ್ಲಿ ಕಾರಣವಾಗುತ್ತಿರಬಹುದು.– ಡಾ| ವಿನಯ್, ಪಶುವೈದ್ಯರು, ತ್ಯಾವರೆಕೊಪ್ಪ ಹುಲಿ-ಸಿಂಹಧಾಮ – ಗೋಪಾಲ್ ಯಡಗೆರೆ