ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ನಜರಾಪುರ ಫಾಲ್ಸ್ ನಲ್ಲಿ ಈಜಲು ನೀರಿಗಿಳಿದ ಇಬ್ಬರು ಯುವಕರು ನೀರು ಪಾಲಾಗಿದ ಘಟನೆ ಶನಿವಾರ ನಡೆದಿದೆ.
ಹೈದರಾಬಾದ್ ಮೂಲದ ಯುವಕರು ಗುರುಮಠಕಲ್ ನ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಮದುವೆಗೆ ಬಂದ ವೇಳೆ ಫಾಲ್ಸ್ ವೀಕ್ಷಿಸಲು ಮೂವರು ಯುವಕರು ಬಂದಿದ್ದರು, ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದು ಮೃತದೇಹಗಳ ಶೋಧ ನಡೆದಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಗುರುಮಠಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ವರ್ಗಾವಣೆಗೆ ತಡೆ
ಗುರುಮಠಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.