Advertisement
ದಿಲ್ಲಿಯಲ್ಲಿ 2012ರ ಡಿ. 16 ರಂದು ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಬಳಿಕ 2013-14ನೇ ಸಾಲಿನಲ್ಲಿ ಶಿಕ್ಷಣ ಇಲಾಖೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಈ ಸ್ವರಕ್ಷಣಾ ಕೌಶಲತರಬೇತಿ ಯೋಜನೆ ಜಾರಿಗೊಳಿಸಿತ್ತು. ಆರಂಭ ವರ್ಷಗಳಲ್ಲಿ ಉತ್ತಮವಾಗಿ ನಡೆದ ಈ ಯೋಜನೆ ಇದೀಗ ಅನು ದಾನವಿಲ್ಲ ಎನ್ನುವ ನೆಪವೊಡ್ಡಿ ಕಳೆದ ಎರಡು ವರ್ಷಗಳಿಂದ ಕರಾಟೆ ತರಬೇತಿ ಸ್ಥಗಿತಗೊಂಡಿದೆ.
ಪ್ರೌಢಶಾಲಾ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾರಕ್ಕೆ ಎರಡು ಅವಧಿಯಲ್ಲಿ 45 ನಿಮಿಷಗಳಂತೆ ಮೂರು ತಿಂಗಳ ಕಾಲ 24 ಗಂಟೆಗಳ ತರಬೇತಿ ನಿಗದಿ ಪಡಿಸಲಾಗಿತ್ತು. ಆಯಾ ಶಾಲಾ ಮುಖ್ಯ ಶಿಕ್ಷಕರು ಗುರುತಿಸಿದ ತರಬೇತಿದಾರರಿಂದ ಜೂಡೋ, ಕರಾಟೆ, ಟೇಕ್ವಾಂಡೋ ಸಹಿತ ವಿವಿಧ ರೀತಿಯ ಕರಾಟೆ ತರಬೇತಿಗಳನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿತ್ತು. ಇದೀಗ ಅವೆಲ್ಲವೂ ಗಗನಕುಸುಮವಾಗಲಿವೆ. ನಿರುದ್ಯೋಗಿಗಳಾದ ಕರಾಟೆ ಶಿಕ್ಷಕರು
ತರಬೇತಿದಾರರ ಗೌರವಧನಕ್ಕಾಗಿ ಹಾಗೂ ಇತರ ಖರ್ಚುವೆಚ್ಚಕ್ಕೆ ಮೂರು ತಿಂಗಳ ಅವಧಿಗೆ ಪ್ರತಿ ಶಾಲೆಗೆ ಒಂಬತ್ತು ಸಾವಿರ ರೂಪಾಯಿ ಅನುದಾನ ಇಲಾಖೆ ನಿಗದಿಪಡಿಸಿತ್ತು. ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿ, ತರಬೇತಿ ನೀಡಿದ ವರದಿ ಪರಿಶೀಲಿಸಿ ಪ್ರತಿ ಅವಧಿಗೆ 350 ರೂ.ಗಳಂತೆ 24 ತರಬೇತಿಗೆ 8,400 ರೂ.ಗಳನ್ನು ತರಬೇತಿಗಳಿಗೆ ಪಾವತಿಸಲಾಗುತ್ತಿತ್ತು. ಇದೀಗ ಅನುದಾನವಿಲ್ಲದೆ ನನೆ ಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು ಒಂದು ಸಾವಿರಕ್ಕೂ ಅ ಧಿಕ ಕರಾಟೆ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ.
Related Articles
ರಾಜ್ಯದ ಒಟ್ಟು 4,643 ಸರಕಾರಿ ಪ್ರೌಢಶಾಲೆಗಳು, ಆದರ್ಶ ವಿದ್ಯಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರೌಢ ಶಾಲೆಗಳಲ್ಲಿ ಮೂರು ತಿಂಗಳು ಕರಾಟೆ ತರಬೇತಿ ನೀಡಲಾಗುತ್ತಿತ್ತು. ಇದರಿಂದ ತರಬೇತಿದಾರರಿಗೂ ಉದ್ಯೋಗ ಸಿಕ್ಕಂತೆ ಆಗಿತ್ತು. ಈ ವಿಶೇಷ ಯೋಜನೆಗೆ ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40ರಷ್ಟು ಅನುದಾನ ನೀಡುತ್ತಿತ್ತು. 2016-17ರಿಂದ ಎರಡೂ ಸರಕಾರಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಪ್ರತಿ ವರ್ಷ ಯೋಜನೆ ಕುರಿತು ಕೇಂದ್ರೀಯ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸ ಲಾಗುತ್ತಿದೆ. ಆದರೆ ಇದು ಅನುಮೋದನೆ ನೀಡಿ, ಅನುದಾನ ಮಂಜೂರು ಮಾಡಿಲ್ಲ. ರಾಜ್ಯ ಸರಕಾರದ ಅನುದಾನ ಕೂಡ ತರಬೇತಿಗೆ ಬಿಡುಗಡೆ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.
Advertisement
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದ ಯೋಜನೆ ಇದೀಗ ನನೆಗುದಿಗೆ ಬಿದ್ದಿದೆ. ಬಹುತೇಕ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಯರು ಕಾಡು ಪ್ರದೇಶದ ದಾರಿ ಯಲ್ಲಿ ಓಡಾಡಬೇಕಾಗಿದ್ದು ಆತ್ಮರಕ್ಷಣೆ ಕಲೆ ಸ್ವಲ್ಪ ಮಟ್ಟಿನ ಧೈರ್ಯವನ್ನು ತುಂಬಿತ್ತು. ಈಗ ವಿದ್ಯಾರ್ಥಿನಿಯರು ಕರಾಟೆಯಿಂದ ವಂಚಿತರಾದಂತಾಗಿದೆ.
ಸ್ವ ರಕ್ಷಣೆಗೆ ಪ್ರಯೋಜನಕಾರಿನಮಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದ ಸ್ವರಕ್ಷಣಾ ಕೌಶಲ ತರಬೇತಿ ಯೋಜನೆ ಸಿಗದಿರುವ ಬಗ್ಗೆ ಬೇಸರವಿದೆ. ನಿತ್ಯ ಕಾಡುದಾರಿಯಲ್ಲಿ ಓಡಾಡುವ ನಮಗೆ ಸ್ವರಕ್ಷಣೆಗೆ ಪ್ರಯೋಜನಕಾರಿಯಾಗಿತ್ತು. ಈ ಬಗ್ಗೆ ಸರಕಾರ ಗಮನಹರಿಸಬೇಕಾಗಿದೆ.
-ಪೂರ್ಣಿಮಾ, ವಿದ್ಯಾರ್ಥಿನಿ ಅನುದಾನ ಇಲ್ಲ
ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ತರಬೇತಿ ನಿಲ್ಲಿಸಲಾಗಿದೆ.
-ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ ಜಿಲ್ಲೆ ಆಶ್ವಾಸನೆ ಮಾತ್ರ
ಈ ಹಿಂದಿನ ಸರಕಾರಕ್ಕೂ ಪ್ರಸ್ತುತ ಇರುವ ಸರಕಾರಕ್ಕೂ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕ್ರಮ ಕೈಗೊಳ್ಳುತ್ತೇವೆ ಎನ್ನುವ ಆಶ್ವಾಸನೆ ಮಾತ್ರ ದೊರಕುತ್ತಿದೆ. ಆದರೆ ಅನುದಾನ ಮಂಜೂರು ಮಾಡುವಲ್ಲಿ ಸರಕಾರ ಮನಸ್ಸು ಮಾಡುತ್ತಿಲ್ಲ.
-ನಿತ್ಯಾನಂದ ಕೆಮ್ಮಣ್ಣು, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಇಚ್ಛಾಶಕ್ತಿ ಅಗತ್ಯ
ವಿದ್ಯಾರ್ಥಿನಿಯರಿಗೆ ಸ್ವ ರಕ್ಷಣೆಗೆ ಪ್ರಯೋಜನಕಾರಿಯಾಗಿದ್ದ ಈ ಯೋಜನೆಯನ್ನು ಮುಂದುವರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಚ್ಛಾಶಕ್ತಿ ತೋರಬೇಕಾಗಿದೆ.
-ಸತೀಶ್ ಬೆಳ್ಮಣ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ.