Advertisement

ಸುಜಿತ್ ಇನ್ನಿಲ್ಲ: ಸತತ ಮೂರು ದಿನಗಳ ಕಾರ್ಯಾಚರಣೆ: ಬದುಕಿಬರಲಿಲ್ಲ ಎರಡು ವರ್ಷದ ಕಂದಮ್ಮ

10:12 AM Oct 30, 2019 | Mithun PG |

ತಿರುಚಿರಪಳ್ಳಿ: ಸತತ ಮೂರು ದಿನಗಳ  ಕಾರ್ಯಾಚರಣೆ ನಡೆಸಿದರೂ ಕೊಳವೆಬಾವಿಯೊಳಗೆ ಬಿದ್ದಿದ್ದ ಎರಡು ವರ್ಷದ ಮಗು ಸುಜಿತ್ ವಿಲ್ಸನ್  ಉಳಿಸಿಕೊಳ್ಳಲಾಗಿಲ್ಲ, ಆತ ಮೃತಪಟ್ಟಿದ್ದಾನೆ, ಮಗುವಿನ ದೇಹ ಸಂಪೂರ್ಣ ಕೊಳೆತು ಹೋಗಿದ್ದು, ಛಿದ್ರವಾಗಿದೆ ಎಂದು ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Advertisement

ಮಗುವನ್ನು ಉಳಿಸಿಕೊಳ್ಳಲೇಬೇಕೆಂದು ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿತ್ತು ಸೋಮವಾರ ಸಂಜೆಯವರೆಗೂ ರಕ್ಷಣಾ ಕಾರ್ಯ ಮುಂದುವರಿದಿದ್ದರೂ ಅದಾಗಲೇ ಕೊಳವೆಬಾವಿಯಿಂದ ಕೆಟ್ಟ ವಾಸನೆ ಹೊರಬರುತ್ತಿತ್ತು. ಕೂಡಲೇ ಮೃತದೇಹ ಹೊರತೆಗೆದು ಪೋಸ್ಟ್ ಮಾರ್ಟಂಗೆ ರವಾನಿಸಲಾಗಿದೆ ಎಂದು ಇಂದು ಬೆಳಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಬಳಿ ಆಟವಾಡುತ್ತಿದ್ದ ಸುಜಿತ್ ಶುಕ್ರವಾರ ಸಂಜೆಯ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಮೊದಲು 25 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ, ನಂತರ  ಕೆಳಕ್ಕೆ ಜಾರಿ 100 ಅಡಿ ಆಳದಲ್ಲಿ ಸಿಲುಕಿದ್ದಾನೆಂದು ಮಾಹಿತಿ ತಿಳಿದುಬಂದಿತ್ತು. ಆದರೇ 3 ದಿನಗಳ ಕಾರ್ಯಚರಣೆ ನಂತರವೂ ಉಳಿಸಿಕೊಳ್ಳಲಾಗಿಲ್ಲ

ತಮಿಳುನಾಡಿನ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಮ್ ಸೇರಿದಂತೆ ಇತರ ಅಧಿಕಾರಿಗಳು  ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಗುವಿನ ಹೆತ್ತವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದರು. ಇದೀಗ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next