Advertisement

ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿಯರು

12:40 PM Aug 01, 2018 | |

ಗೋಂಡಿಯಾ: ನದಿಯ ಬಂಡೆಯ ಮೇಲೆ ಸೆಲ್ಫಿ ತೆಗೆಯಲೆಂದು ಹೋದ ವಿದ್ಯಾರ್ಥಿನಿಯರು ನದಿಗೆ ಬಿದ್ದು  ಸಾವನ್ನಪ್ಪಿದ ಘಟನೆ ಗೋಂಡಿಯಾ ಜಿಲ್ಲೆಯ ರಾಜೆಗಾಂವ್‌ ನಲ್ಲಿ  ಸಂಭವಿಸಿದೆ.

Advertisement

ಮೃತ ವಿದ್ಯಾರ್ಥಿಗಳನ್ನು  ಸಮತಾ ನಾಯ್ಕರೆ (20) ಮತ್ತು ಮೇಘಾ ಸಹಾರೆ (20) ಎಂದು ಗುರುತಿಸಲಾಗಿದೆ. ಇವರು  ನರ್ಸಿಂಗ್‌  ಕಾಲೇಜಿನ ವಿದ್ಯಾರ್ಥಿ ಗಳಾಗಿದ್ದಾರೆ.  
ಕಾಲೇಜು ಬಿಟ್ಟ ಅನಂತರ ಒಂಬತ್ತು ಮಂದಿ ವಿದ್ಯಾರ್ಥಿಗಳು ತಿರುಗಾಟಕ್ಕೆಂದು ವಾಘ ನದಿಯ ಮೇಲ್ಭಾಗದ ಕೋರ್‌ನಿ ಘಾಟಿನ ಬಳಿ ಹೋಗಿದ್ದರು. ಅಲ್ಲಿ ಘಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next