Advertisement

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

04:27 PM Aug 10, 2022 | Team Udayavani |

ಚಿಕ್ಕಮಗಳೂರು: ಮನೆ ಮೇಲೆ ಮರಬಿದ್ದು ಸಾವನ್ನಪ್ಪಿರುವ ಮಹಿಳೆಯರು ಈ ಹಿಂದೆ ಮರ ತೆರವಿಗೆ ಅಧಿಕಾರಿಗಳಿಗೆ ಮಾಡಿದ ಮನವಿಯ ವಿಡಿಯೋ ಈಗ ವೈರಲ್‌ ಆಗಿದೆ.

Advertisement

ಘಟನೆ ಹಿನ್ನೆಲೆ:

ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಕೆ. ತಲಗೂರು ಗ್ರಾಮದ ಚಂದ್ರಮ್ಮ ಎಂಬವರ ಮನೆಯಲ್ಲಿ ಚಂದ್ರಮ್ಮ, ಸರಿತಾ ಹಾಗೂ ಸರಿತಾ ಅವರ ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ಮಲಗಿದ್ದ ವೇಳೆ ಮನೆಯ ಪಕ್ಕದಲ್ಲೇ ಇದ್ದ ಭಾರಿ ಗಾತ್ರದ ಮರವೊಂದು ಚಂದ್ರಮ್ಮ ಅವರ ಮನೆಯ ಮೇಲೆ ಬಿದ್ದು ಸರಿತಾ ಹಾಗೂ ಚಂದ್ರಮ್ಮ ಮೃತಪಟ್ಟಿದ್ದರು. ಘಟನೆಯಲ್ಲಿ ಸರಿತಾ ಅವರ ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಎರಡು ತಿಂಗಳ ಹಿಂದೆ ಚಂದ್ರಮ್ಮ ಹಾಗೂ ಸರಿತಾರವರು ಮನೆ ಮುಂದಿದ್ದ ಬೃಹತ್‌ ಗಾತ್ರದ ಮರವನ್ನು ತೆರವಗೊಳಿಸಿ, ಇದರಿಂದ ಅಪಾಯಯಿದೆ ಎಂದು, ಜನಪ್ರತಿನಿಧಿಗಳಿಗೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ತಹಶೀಲ್ದಾರ್ ಗೆ ಮನವಿ ಮಾಡಿದ್ದರು. ಸದ್ಯ ಈ ವಿಡಿಯೋ ಈಗ ಹೊರ ಬಿದ್ದಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹಾಕುತ್ತಿದ್ದಾರೆ.

ಮೊದಲೇ ಮರ ತೆರವಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದಲೇ ಈ ದುರಂತ ನಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.  ಮೃತರು ಹಿಂದೆ ಮನವಿ ಮಾಡಿರುವ ವಿಡಿಯೋ ಗ್ರಾಮದಾದ್ಯಂತ ವಿಡಿಯೋ ವೈರಲ್ ಆಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next