Advertisement
ಟಿವಿಎಸ್ ಮೋಟಾರ್ ಕಂಪೆನಿಯ ವಾಹನಗಳ ಮಾರಾಟ ಕಳೆದ ವರ್ಷದಲ್ಲಿ ಶೇ.15ರಷ್ಟು ಕುಸಿತ ಕಂಡಿದೆ. 2018ರ ಡಿಸೆಂಬರ್‌ನಲ್ಲಿ 2,71,395 ವಾಹನಗಳು ಮಾರಾಟ ಮಾಡಿದ್ದ ಸಂಸ್ಥೆ 2019ರ ಡಿಸೆಂಬರ್ ತಿಂಗಳಲ್ಲಿ 2,31,571 ವಾಹನ ಮಾರಾಟ ಮಾಡಿದೆ.
ಬಜಾಜ್ ಆಟೋ ಇಂಡಿಯಾ ಕೂಡ ಶೇ 12ರಷ್ಟು ಕುಸಿತ ಕಂಡಿದ್ದು, 2019ರ ಎಪ್ರಿಲ್ – ಡಿಸೆಂಬರ್ ಅವಧಿಯಲ್ಲಿ 19,65,547 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,28,421 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಒಟ್ಟಾರೆ ದೇಶಿ ದ್ವಿಚಕ್ರ ಆಟೋಮೊಬೈಲ್ ಉದ್ಯಮ 2019ರಲ್ಲಿ ಶೇ 3ರಷ್ಟು ಕುಸಿತ ದಾಖಲಿಸಿದೆ.