ಪುಂಜಾಲಕಟ್ಟೆ: ದ್ವಿಚಕ್ರ ವಾಹನ ಅಪಘಾತದಲ್ಲಿ ರಂಗಭೂಮಿ ಕಲಾವಿರೋರ್ವರು ಮೃತಪಟ್ಟ ಘಟನೆ ಡಿ.31ರ ರವಿವಾರ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ.ಬೇಬಿ ಅವರ ಪುತ್ರ ಗೌತಮ್ (26) ಮೃತಪಟ್ವರಾಗಿದ್ದಾರೆ.
ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಡಿ.30 ರಂದು ಬೆಳುವಾಯಿಯಲ್ಲಿ ನಾಟಕ ಮುಗಿಸಿ ತಡರಾತ್ರಿ ಸುಮಾರು 3ಗಂಟೆಯ ಹೊತ್ತಿಗೆ ಮನೆಗೆ ಹಿಂತಿರುಗುತ್ತಿರುವಾಗ ಅವರ ಸ್ಕೂಟರ್ ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿಯಾಗಿ ಗೌತಮ್ ಅವರ ತಲೆಗೆ ಏಟಾಗಿ ರಸ್ತೆಗೆ ಬಿದ್ದಿದ್ದರು. ಬೆಳಗ್ಗೆಯಷ್ಟೆ ಘಟನೆ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಅವಿವಾಹಿತರಾಗಿದ್ದ ಅವರು ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಾಯಿ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಉತ್ತಮ ನಾಟಕ ಕಲಾವಿದರಾಗಿದ್ದ ಅವರು ಹಲವಾರು ಸಂಘ ಸಂಸ್ಥೆಗಳ ನಾಟಕಗಳಲ್ಲಿ ಪಾತ್ರ ವಹಿಸಿದ್ದರು.