ಕಾರಣಗಳು ಏನು?
ಹೆಚ್ಚುತ್ತಿರುವ ಅಪಘಾತಗಳಿಗೆ ದೋಷಪೂರಿತ ವಾಹನ ಚಾಲನ ಪರವಾನಿಗೆ ಕಾನೂನುಗಳು ಪ್ರಮುಖ ಕಾರಣವಾಗಿವೆ. ಜತೆಗೆ ಸರಿಯಾದ ತರಬೇತಿ ಕೊರತೆ, ಕಳಪೆ ರಸ್ತೆಗಳು ಮತ್ತು ಅಸುರಕ್ಷಿತ ಹೆಲ್ಮೆಟ್‌ಗಳಿಂದಾಗಿ ಹೆಚ್ಚಿನ ಅಪಘಾತಗಳು ಮತ್ತು ಸಾವುಗಳು ಸಂಭವಿಸುತ್ತಿವೆ. ಸರಿಯಾದ ಹೆಲ್ಮೆಟ್ ಬಳಕೆಯು ಮರಣಾಂತಿಕ ಗಾಯಗಳ ಅಪಾಯವನ್ನು ಶೇ. 42ರಷ್ಟು ಮತ್ತು ಮತ್ತು ತಲೆಗಾಗುವ ಏಟನ್ನು ಶೇ. 69ರಷ್ಟು ಕಡಿಮೆಯಾಗಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿತ್ತು.
Advertisement
ಸಮರ್ಪಕ ಕಾನೂನು ಅಗತ್ಯದೇಶದಲ್ಲಿ ಕಠಿನ ವಾಹನ ಚಾಲನ ಪರವಾನಿಗೆ ಕಾನೂನುಗಳನ್ನು ಜಾರಿಗೊಳಿಸಬೇಕಾಗಿರುವುದು ಅನಿವಾರ್ಯ.ಜತೆಗೆ ಕಾನೂನುಗಳ ಬಗೆಗೆ ಸಮರ್ಪಕ ಮಾಹಿತಿ ನೀಡಬೇಕಿದೆ. ಅಷ್ಟೇ ಅಲ್ಲದೆ ಪ್ರಮಾಣೀಕೃತ ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಮೊತ್ತದ ದಂಡ ಹೇರುವ ಮೂಲಕ ಯುವಕರ ಈ ಖಯಾಲಿಗೆ ಕಡಿವಾಣ ಹಾಕಬೇಕಿದೆ. ದೇಶಾದ್ಯಂತದ ಕಳಪೆ ರಸ್ತೆಗಳೂ ಅಪಘಾತಗಳಿಗೆ ಕಾರಣವಾಗುತ್ತಿರುವುದರಿಂದ ರಸ್ತೆಗಳ ದುರಸ್ತಿಯನ್ನು ಆದ್ಯತೆಯನ್ನಾಗಿ ಪರಿಗಣಿ ಸಬೇಕು ಎಂಬುದು ತಜ್ಞರ ಅಭಿಪ್ರಾಯ.
ಕಳೆದ ದಶಕದಲ್ಲಿ ಭಾರತವು ತಲಾ ಆದಾಯದಲ್ಲಿ ಶೀಘ್ರ ಬೆಳವಣಿಗೆಯನ್ನು ಕಂಡಿದೆ. ಇದು ಜನರು ಹೆಚ್ಚಿನ ವಾಹನಗಳನ್ನು ಖರೀದಿಸಲು ಕಾರಣವಾಯಿತು. ವಿಶೇಷವಾಗಿ ದ್ವಿಚಕ್ರ ವಾಹನಗಳು. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಭಾರತದ ತಲಾ ಆದಾಯವು 2013 ಮತ್ತು 2017ರ ನಡುವೆ ಶೇ. 28ರಷ್ಟು ಏರಿಕೆಯಾಗಿದೆ. ಮಾತ್ರವಲ್ಲದೇ ದ್ವಿಚಕ್ರ ವಾಹನ ನೋಂದಣಿಯು ಇದೇ ಅವಧಿಯಲ್ಲಿ ಶೇ. 46ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ದೇಶದಲ್ಲಿ 21.2 ಮಿಲಿಯನ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ವಾರ್ಷಿಕ ಮಾರಾಟವು 2025ರ ವೇಳೆಗೆ ಶೇ.2.6 ಬೆಳವಣಿಗೆಯ ದರದಲ್ಲಿ 26.6 ಮಿಲಿಯನ್ ಯುನಿಟ್‌ಗಳನ್ನು ತಲುಪಲಿದೆ ಎಂದು ಮಾಹಿತಿ ನೀಡಿದೆ. 2016ರಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ಮೋಟಾರ್ ಸೈಕಲ್ ಹೆಲ್ಮೆಟ್ ಅಧ್ಯಯನ ವರದಿಯಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿರುವುದು ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಲೈಸೆನ್ಸ್ ಇಲ್ಲದೇ ಚಾಲನೆ
ಅಸಮರ್ಪಕ ವಾಹನ ಚಾಲನ ಪರವಾನಿಗೆ ಕಾನೂನುಗಳು, ಕಡಿಮೆ ತರಬೇತಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಚಾಲನ ಪರವಾನಿಗೆ ಇಲ್ಲದ ಚಾಲಕರನ್ನು ಒಳಗೊಂಡ ರಸ್ತೆ ಅಪಘಾತಗಳು 2018ರಲ್ಲಿ 37,585ರಷ್ಟಿತ್ತು. ಆದರೆ 2019ರಲ್ಲಿ ಇದರ ಪ್ರಮಾಣ 44,358ಕ್ಕೆ ಏರಿದೆ. ಅಂದರೆ ಹಿಂದಿನ ವರ್ಷಕ್ಕಿಂತ ಶೇ. 18ರಷ್ಟು ಹೆಚ್ಚಳವಾಗಿದ್ದು, ಒಟ್ಟು ಅಪಘಾತಗಳ ಪೈಕಿ ಇವುಗಳ ಪಾಲು ಶೇ. 9.9ರಷ್ಟು. ಇನ್ನು ಸುಮಾರು ಶೇ. 72 ರಸ್ತೆ ಅಪಘಾತಗಳು ಚಾಲಕರು ಅಧಿಕೃತ ಚಾಲನ ಪರವಾನಿಗೆ ಹೊಂದಿರುವವರು ಎಂದು ಸಚಿವಾಲಯ ಬಿಡುಗಡೆ ಮಾಡಿರುವ ವರದಿಯು ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ಅವಲೋಕಿಸಿದರೆ ರಾಂಗ್ ಸೈಡ್‌ನಲ್ಲಿ ವಾಹನ ಚಾಲನೆಯಿಂದ ಶೇ. 5.2, ಪಾನಮತ್ತರಾಗಿ ವಾಹನ ಚಾಲನೆಯಿಂದ ಶೇ. 3.7ರಷ್ಟು ಅಪಘಾತಗಳು ಸಂಭವಿಸುತ್ತಿವೆ.
Related Articles
ಭಾರತದಲ್ಲಿ ಅಪಘಾತ ಸಂಬಂಧಿತ ಸಾವುಗಳಲ್ಲಿ ದ್ವಿಚಕ್ರ ಮತ್ತು ಪಾದಚಾರಿಗಳ ಪ್ರಮಾಣ ಶೇ. 54ರಷ್ಟಿದೆ. ಶೇ. 37ರಷ್ಟು (56,136) ರಸ್ತೆ ಅಪಘಾತಗಳಿಂದಾಗಿ ಸಾವುಗಳು ಸಂಭವಿಸುತ್ತಿವೆ ಅಂದರೆ ಪ್ರತೀ ಗಂಟೆಗೆ ಸರಾಸರಿ ಆರು ಸಾವುಗಳಿಗೆ ದ್ವಿಚಕ್ರ ವಾಹನಗಳು ಕಾರಣವಾಗುತ್ತಿವೆ. ಇನ್ನು ಶೇ. 17ರಷ್ಟು ಪಾದಚಾರಿಗಳು, ಶೇ.3ರಷ್ಟು ಸೈಕ್ಲಿಸ್ಟ್ ಗಳು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಭಾರತೀಯ ರಸ್ತೆಗಳು ವಿಶ್ವದಲ್ಲೇ ಅತೀ ಕೆಟ್ಟ ರಸ್ತೆಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ ಜಾಗತಿಕ ರಸ್ತೆ ಅಪಘಾತಗಳಲ್ಲಿ ಭಾರತದ ಪಾಲು ಶೇ. 11ರಷ್ಟು.
Advertisement
2019: 44,666 ಸಾವುಹೆಲ್ಮೆಟ್ ಧರಿಸದ ಕಾರಣ 2019ರಲ್ಲಿ 44,666 (30,148 ಚಾಲಕರು ಮತ್ತು 14,518 ಹಿಂಬದಿ ಸವಾರರು) ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಸ್ಪೆಂಡ್ ವರದಿ ಮಾಡಿದೆ.