Advertisement
ಬಂಟ್ವಾಳ ತಾ|ನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಾಲೆದಡಿ ಹಾಗೂ ಪಚ್ಚೇರು ಪಲ್ಕೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ವಿದ್ಯಾರ್ಥಿನಿಯರ ಎರಡು ಸುಸಜ್ಜಿತ ಹಾಸ್ಟೆಲ್ ತಲಾ 3.37 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. 2017ರಲ್ಲಿ ಇದು ಮಂಜೂರುಗೊಂಡಿದ್ದು, 2018ರಿಂದ ಕೆಲಸ ಆರಂಭಗೊಂಡಿದೆ.
ಮಾಜಿ ಶಾಸಕ ಬಿ. ರಮಾನಾಥ ರೈ ಹಾಗೂ ಇಲ್ಲಿನ ಸಾಮಾಜಿಕ ಕಾರ್ಯಕರ್ತ ದಿ| ಗಣೇಶ್ ಪೈ ಮುತುವರ್ಜಿಯಿಂದ . ವಾಮದಪದವಿನಲ್ಲಿ ಪ್ರಾ. ಶಾಲೆಯಿಂದ ಪದವಿ ಯವರೆಗೆ ಸರಕಾರಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಆಗಿದ್ದು, ಕಳೆದ 25 ವರ್ಷ ಗಳಿಂದ ಹಿಂ. ವರ್ಗಗಳ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ಹಾಸ್ಟೆಲ್‌ಗಳು ಮತ್ತು ಕಳೆದ 10 ವರ್ಷಗಳಿಂದ ಮೆಟ್ರಿಕ್ ಅನಂತರದ ವಿದ್ಯಾರ್ಥಿನಿ ಯರ ಹಾಸ್ಟೆಲ್‌ಗಳು ಕಾರ್ಯಾಚರಿಸುತ್ತಿವೆ. ಮೆಟ್ರಿಕ್ ಅನಂತರದ ಹಾಸ್ಟೆಲ್‌ನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಸೇರ್ಪಡೆ ಬಳಿಕ ಮತ್ತಷ್ಟು ಅರ್ಜಿ ಇದ್ದುದರಿಂದ ನಾಲ್ಕು ವರ್ಷಗಳ ಹಿಂದೆ ಮತ್ತೂಂದು ಹಾಸ್ಟೆಲ್ ಸ್ಥಾಪನೆಯಾಗಿದೆ. ಇದೀಗ ಮೆಟ್ರಿಕ್ ಅನಂತರದ ಒಟ್ಟು 250 ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದು, ವ್ಯಾಸಂಗ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಾಮದಪದವಿನಲ್ಲಿ ಈ ಹಾಸ್ಟೆಲ್‌ಗಳಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದ ಬಾಲಕರ ಹಾಸ್ಟೆಲ್‌ಗಳೂ ನಡೆಯುತ್ತಿದ್ದು, 130 ವಿದ್ಯಾರ್ಥಿಗಳು ಇದರಲ್ಲಿದ್ದಾರೆ. ಹಿಂ. ವರ್ಗಗಳ ಕಲ್ಯಾಣ ಇಲಾಖೆಯಿಂದ ಸ್ಥಾಪನೆಗೊಂಡ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯಾ ಚರಿ ಸುತ್ತಿದ್ದು, ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳಾಂತರಗೊಳ್ಳಲಿದೆ.
Related Articles
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಅಂತಸ್ತಿನ ವಿಶಾಲ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಎರಡೂ ಕಟ್ಟಡಗಳು ಒಂದೇ ಮಾದರಿಯಲ್ಲಿದ್ದು, 16 ವಿದ್ಯಾರ್ಥಿ ಕೊಠಡಿಗಳು, 1 ಅಡುಗೆ ಕೋಣೆ, 1 ಡೈನಿಂಗ್, 1 ಸ್ಟೋರ್ ರೂಂ, ಶೌಚಾಲಯ, ವಿಶ್ರಾಂತಿ ಕೊಠಡಿಗಳು ಇದರಲ್ಲಿವೆ. 2018ರ ಎಪ್ರಿಲ್ ತಿಂಗಳಿನಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ಸೆಪ್ಟಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ.
ಬೆಂಗಳೂರಿನ ಎಂ.ಕೆ.ಕೆ.ವಿ. ಕನ್‌ಸ್ಟ್ರಕ್ಷನ್ ಸಂಸ್ಥೆ ನಿರ್ಮಾಣ ಗುತ್ತಿಗೆಯನ್ನು ವಹಿಸಿಕೊಂಡಿದ್ದು, ಎರಡೂ ಕಟ್ಟಡಗಳು ಒಟ್ಟಿಗೆ ಪೂರ್ಣಗೊಳ್ಳಲಿವೆ.
Advertisement
ವಿದ್ಯಾರ್ಥಿಗಳಿಗೆ ಆಸರೆವಾಮದಪದವಿನ ಅಭಿವೃದ್ಧಿಯ ರೂವಾರಿ ದಿ| ಗಣೇಶ್ ಪೈ ಹಾಗೂ ಮಾಜಿ ಶಾಸಕ ಬಿ. ರಮಾನಾಥ ರೈ ಅವರ ಮುತುವರ್ಜಿಯಿಂದ ಇಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೊಂದಿಗೆ ಹಾಸ್ಟೆಲ್ ನಿರ್ಮಾಣ ವಾಗಿದ್ದುª, ಊರ, ಪರ ವೂರ ವಿದ್ಯಾರ್ಥಿಗಳಿಗೆ ಆಸರೆಯಾ ಗಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.
– ನವೀನಚಂದ್ರ ಶೆಟ್ಟಿ, ಮಾಜಿ ಅಧ್ಯಕ್ಷರು, ಸ.ಪ್ರ.ದ.ಕಾ. ಅಭಿವೃದ್ಧಿ ಸಮಿತಿ, ವಾಮದಪದವು ಕಾರ್ಯ ಪ್ರಗತಿಯಲ್ಲಿ
ವಾಮದಪದವು ಸರಕಾರಿ ಕಾಲೇಜಿಗೆ ಅನುಕೂಲವಾಗುವಂತೆ 3 ಹಾಸ್ಟೆಲ್‌ಗಳು ಮಂಜೂರಾಗಿದ್ದು, ಬಾಲಕರ ಹಾಸ್ಟೆಲ್ ಈಗಾಗಲೇ ನಿರ್ಮಾಣಗೊಂಡು ಕಾರ್ಯಾರಂಭಿಸಿದೆ. ಸುಮಾರು 7 ಕೋ. ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರ 2 ಹಾಸ್ಟೆಲ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಡಲಾಗುವುದು.
– ಬಿ. ರಮಾನಾಥ ರೈ, ಮಾಜಿ ಸಚಿವರು ಸ್ವಂತ ಕಟ್ಟಡ
ವಾಮದಪದವಿನಲ್ಲಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾಭ್ಯಾಸ ಪಡೆಯುವ ಅವಕಾಶ ಇದ್ದು, ಹಾಸ್ಟೆಲ್‌ಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿರುವ 4 ಹಾಸ್ಟೆಲ್‌ಗಳ ಪೈಕಿ ಮೆಟ್ರಿಕ್ ಅನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.
– ಶಿವಣ್ಣ, ವಿಸ್ತರಣಾಧಿಕಾರಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾಕರ ಇಲಾಖೆ, ಬಂಟ್ವಾಳ ತಾಲೂಕು ರತ್ನದೇವ್ ಪುಂಜಾಲಕಟ್ಟೆ