Advertisement

Jog Falls ಸಮೀಪದ ದೇವಿಗುಂಡಿಯಲ್ಲಿ ಇಬ್ಬರು ನೀರುಪಾಲು

07:23 PM Sep 24, 2023 | Vishnudas Patil |

ಸಾಗರ: ರಜಾದಿನವಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಸಮೇತ ತಾಲೂಕಿನ ಜೋಗ್ ಫಾಲ್ಸ್ ಪ್ರವಾಸಕ್ಕೆ ಭಾನುವಾರ ತೆರಳಿದ್ದ ಸಾಗರದ ಇಬ್ಬರು ಜೋಗದ ಸಮೀಪದ ದೇವಿಗುಂಡಿ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

Advertisement

ಮೃತರನ್ನು ಸಾಗರದ ಕೃಷಿ ಇಲಾಖೆಯ ಅಧಿಕಾರಿ ಕೆ.ಟಿ. ಕೃಷ್ಣಕುಮಾರ್(36) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕಿನ ಕಲೆಕ್ಟರ್ ಅರುಣ್(28) ಎಂದು ಗುರುತಿಸಲಾಗಿದೆ. ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ಹೊಳೆಬಸಪ್ಪ ಮತ್ತು ಸಿಬಂದಿ ಘಟನೆಯ ಸ್ಥಳಕ್ಕೆ ತೆರಳಿ ಶವಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾಗರದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next