Advertisement

ಶುದ್ಧ ಕುಡಿಯುವ ನೀರಿನ ಎರಡು ಘಟಕ ವ್ಯರ್ಥ

05:51 PM Apr 05, 2019 | pallavi |
ಸವಣೂರು : ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹಾತ್ವಾಕಾಂಕ್ಷಿ ಯೋಜನೆಯ ನಿಮಿತ್ತ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ದಿಂದ ಸವಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸವಣೂರು- ಕಾಣಿಯೂರು ಮುಖ್ಯ ರಸ್ತೆಯ ಸಮೀಪ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಹಸುರು ಮೇವಿನ ತೋಟದ ಎದುರು ಅಟ್ಟೋಳೆ ಎನ್ನುವಲ್ಲಿ ಮತ್ತು ಪಾಲ್ತಾಡಿ ಗ್ರಾಮದ ಬಂಬಿಲ-ಅಂಕತ್ತಡ್ಕ ರಸ್ತೆಯ ಮಂಜುನಾಥನಗರ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ನಿರ್ಮಿಸ ಲಾದ ಶುದ್ಧ ಕುಡಿಯುವ ನೀರಿನ ಘಟಕಗಳು
ಇನ್ನೂ ಕಾರ್ಯಾರಂಭ ಮಾಡಿಲ್ಲ.
ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ.ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ.ಈ ಸಮಯದಲ್ಲಿ ಹೆಚ್ಚು ಅನುಕೂಲಕರವಾಗಿರಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣ ವಾದರೂ ಉಪಯೋಗ ವಿಲ್ಲ ದಂತಾಗಿದೆ. ಈ ಘಟಕದ ಕಾಮ ಗಾರಿ ಆರಂಭವಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಇದನ್ನು ಉಪಯೋಗಕಾರಿಯಾಗಿ ಮಾಡಲು ಸಂಬಂಧಪಟ್ಟವರಿಗೆ ಸಾಧ್ಯವಾಗಿಲ್ಲ.
ವಿದ್ಯುತ್‌ ಸಂಪರ್ಕ ಬಾಕಿ ಘಟಕದ ಬಹುತೇಕ ಕಾಮ ಗಾರಿಗಳು ಪೂರ್ಣಗೊಂಡಿದ್ದು, ವಿದ್ಯುತ್‌ ಸಂಪರ್ಕ ನೀಡಲು ಬಾಕಿಯಿದೆ. ನೀರು ಸಂಗ್ರಹಣ ಟ್ಯಾಂಕ್‌ ಮತ್ತು ಇತರ ಶುದ್ಧೀಕರಣ ಉಪಕರಣಗಳು ಸಹಿತ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳನ್ನು ಘಟಕದಲ್ಲಿ ಅಳವಡಿಸಲಾಗಿದ್ದು, ಅವು ಗಳೆಲ್ಲವೂ ಕಾರ್ಯಾ ರಂಭ ಗೊಳ್ಳದೆ ನಿಷ್ಪ್ರಯೋಜಕವಾಗಿದ್ದು, ತುಕ್ಕು ಹಿಡಿಯಲಾರಂಭಿಸಿವೆ.
ಈ ಘಟಕಗಳ ಕಾಮಗಾರಿಯ ಹೊಣೆಯನ್ನು ಕೆಆರ್‌ಐಡಿಎಲ್‌ ನಿಗಮ ವಹಿಸಿಕೊಂಡಿದ್ದು, ಕಾಮಗಾರಿ ಪೂರ್ಣ
ಗೊಂಡ ಅನಂತರ ನಿರ್ವಹಣೆಯ ಜವಾಬ್ದಾರಿ ಯನ್ನು ಸ್ಥಳೀಯ ಗ್ರಾ.ಪಂ. ಗೆ ಹಸ್ತಾಂತರಿ ಸಲಾ ಗುತ್ತದೆ. ಘಟಕಕ್ಕೆ
ವಿದ್ಯುತ್‌ ಸಂಪರ್ಕ ಮಂಜೂರು ಮಾಡಲು ಮೆಸ್ಕಾಂಗೆ ನಿರಾಕ್ಷೇಪಣ ಪತ್ರವನ್ನು ಗ್ರಾ.ಪಂ.ನಿಂದ ನೀಡಿ ಮೂರು ತಿಂಗಳು ಗಳು ಕಳೆದಿವೆ. ಆದರೆ ಕೆಆರ್‌ಐಡಿಎಲ್‌ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಇನ್ನೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿಲ್ಲ.
ಬೇಸಗೆಯಲ್ಲಿ ಉಪಯೋಗವಾಗುತ್ತಿತ್ತು ಎರಡು ರೂಪಾಯಿಯ ನಾಣ್ಯವನ್ನು ಹಾಕಿ 20 ಲೀ. ಶುದ್ಧ ಕುಡಿಯುವ ನೀರು ಪಡೆಯುವ ವ್ಯವಸ್ಥೆಯನ್ನು ಈ ಘಟಕಗಳಲ್ಲಿ ಅಳವಡಿಸಲಾಗುತ್ತಿದ್ದು, ಆ ಮೂಲಕ ಆಸುಪಾಸಿನ ಜನರಿಗೆ ಆರೋಗ್ಯಪೂರ್ಣ ಕುಡಿಯುವ ನೀರು ದೊರಕಿಸುವ ಸರ್ಕಾರದ ಮಹಾತ್ವಾ ಕಾಂಕ್ಷಿ ಯೋಜನೆ ಇದಾಗಿದೆ.
ಈ ಎರಡೂ ಘಟಕಗಳ ಆಸು ಪಾಸಿನಲ್ಲಿ ನೂರಾರು ಮನೆಗಳಿದ್ದು, ಒಂದೊಮ್ಮೆ ಈ ಘಟಕಗಳು ಕಾರ್ಯಾ ರಂಭಿಸಿದ್ದರೆ ಈ ಕಡುಬೇಸಗೆಯ ದಿನ ಗಳಲ್ಲಿ ಕುಡಿ ಯುವ ನೀರಿನ ಸಮಸ್ಯೆ ಯಿಂದ ಬಳಲುತ್ತಿರುವ ಜನರಿಗೆ ಬಹಳ ಪ್ರಯೋಜನಕಾರಿಯಾಗುತ್ತಿತ್ತು. ಈ ಘಟಕಗಳ ಕಾಮಗಾರಿಯ ಹೊಣೆ ಹೊತ್ತಿರುವ ಅಧಿಕಾರಿಗಳು ಆದಷ್ಟು ಬೇಗ ಈ ಕುರಿತು ಗಮನ ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 ಬೇಗ ಮುಗಿಸಲು ಮನವಿ ಸವಣೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎರಡು ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕಗಳನ್ನು ಸ್ಥಾಪಿಸಲಾಗಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾ.ಪಂ. ವಹಿಸಿಕೊಳ್ಳಲಿದೆ. ಗ್ರಾ.ಪಂ. ವತಿಯಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಪೂರ್ತಿಗೊಳಿಸಿದ್ದು, ಕೆಆರ್‌ ಐಡಿಎಲ್‌ ನಿಗಮದ ಅಧಿಕಾರಿಗಳಿಗೆ ಕಾಮಗಾರಿಯನ್ನು ಬೇಗ ಮುಗಿಸುವಂತೆ ಮನವಿ ಸಲ್ಲಿಸಲಾಗಿದೆ.
 - ಇಂದಿರಾ ಬಿ.ಕೆ.  ಅಧ್ಯಕ್ಷರು, ಸವಣೂರು ಗ್ರಾ.ಪಂ.
 ಆಸಕ್ತಿ ತೋರಿಸಲಿ ಸರಕಾರಗಳು ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತೋರುವ ಆಸಕ್ತಿಯನ್ನು ಅನುಷ್ಠಾನ ಮಾಡುವಲ್ಲಿ ತೋರಿಸುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸಬೇಕಾದ ನಿಗಮ ಅಥವಾ ಗುತ್ತಿಗೆದಾರರನ್ನು ಪ್ರಶ್ನೆ ಮಾಡದಿರುವುದೇ ಇಂತಹ ಯೋಜನೆಗಳು ಹಳ್ಳ ಹಿಡಿಯಲು ಪ್ರಮುಖ ಕಾರಣವಾಗಿದೆ. ಈ ಕುರಿತು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಂಡು ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ ಮಾಡುವಂತೆ ಮಾಡಬೇಕಿದೆ.
  – ಸುಬ್ರಹ್ಮಣ್ಯ ಸವಣೂರು ಸ್ಥಳೀಯರು
ವಿಶೇಷ ವರದಿ
Advertisement

Udayavani is now on Telegram. Click here to join our channel and stay updated with the latest news.

Next