Advertisement

ಪುಲ್ವಾಮಾ: ಉಗ್ರರಿಬ್ಬರ ಹತ್ಯೆ,ಇನ್ನೊಬ್ಬನಿಗಾಗಿ ಭಾರೀ ಕಾರ್ಯಾಚರಣೆ 

11:21 AM Jul 30, 2017 | |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ತಹಾಬ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಕಟ್ಟಡದಲ್ಲಿ ಅಡಗಿರುವ ಇನ್ನೋರ್ವ ಉಗ್ರನಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Advertisement

ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಂಟಿಯಾಗಿ ಹುಡುಕಾಟಕ್ಕಿಳಿದ ವಿಶೇಷ ಕಾರ್ಯಾಚರಣೆ ಪಡೆಗಳು ಮತ್ತು  44 ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಸೈನಿಕರು ಉಗ್ರರನ್ನು ಹತ್ಯೆಗೈದಿವೆ. 

ಶನಿವಾರ ರಾತ್ರಿ ಗುಂಡಿನ ಚಕಮಕಿಯ ಬಳಿಕ ಭಾನುವಾರ ಉಗ್ರರಿಬ್ಬರನ್ನು ಹತ್ಯೆಗೈಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next