Advertisement

ಶೋಪಿಯಾನ್‌ನಲ್ಲಿ ಉಗ್ರರಿಬ್ಬರ ಹತ್ಯೆ; ಐಇಡಿ ನಿಷ್ಕ್ರಿಯ

09:00 AM Jun 12, 2019 | Vishnu Das |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ವಯ ಸೇನಾ ಪಡೆಗಳು ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು ಮಂಗಳವಾರ ಬೆಳಗ್ಗೆ ಅವ್‌ನೀರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

Advertisement

ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗ ಉಗ್ರರ ವಿರುದ್ಧ ಸೇನಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು.

ಸ್ಥಳದಲ್ಲಿ ಇನ್ನೂ ಕೆಲ ಉಗ್ರರಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಸಾರ್ವಜನಿಕರು ಎನ್‌ಕೌಂಟರ್‌ ನಡೆದಿರುವ ಸ್ಥಳಕ್ಕೆ ಬರದಂತೆ ಭದ್ರತಾ ಪಡೆಗಳು ತಡೆ ಒಡ್ಡಿವೆ. ಸ್ಥಳದಲ್ಲಿ ಉಗ್ರರು ಸ್ಫೋಟಕಗಳನ್ನು ಹುದುಗಿಟ್ಟಿರುವ ಸಾಧ್ಯತೆಗಳಿವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಐಇಡಿ ನಿಷ್ಕ್ರಿಯ
ಇನ್ನೊಂದೆಡೆಕೃಷ್ಣ ಘಾಟಿ ಪ್ರದೇಶದಲ್ಲಿ ಸೇನಾಡಡೆಗಳು ಉಗ್ರರು ಇರಿಸಿದ್ದ ಐಇಡಿ ನಿಷ್ಕ್ರಿಯ ಗೊಳಿಸಿ ಭಾರೀ ಅನಾಹುತ ತಡೆದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next