Advertisement

ಬೈಕ್-ಲಾರಿ ಮುಖಾಮುಖಿ ಢಿಕ್ಕಿ: ಸ್ಥಳದಲ್ಲಿಯೇ ಶಿಕ್ಷಕರಿಬ್ಬರ ಸಾವು

06:21 PM Jul 17, 2021 | keerthan |

ವಿಜಯಪುರ: ಶನಿವಾರ ಸಂಜೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿಯಾಗಿದ್ದು, ದುರಂತದಲ್ಲಿ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆ ನಡೆದಿದೆ.

Advertisement

ಅಪಘಾತದ ಸ್ಥಳದಲ್ಲೇ ಮೃತರಾದವರನ್ನು ವಿಜಯಪುರ ‌ತಾಲೂಕಿನ ಬರಟಗಿ ಎಲ್.ಟಿ. ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಚ್.ಹುದ್ದಾರ (58 ವ) ಹಾಗೂ ಸಹ ಶಿಕ್ಷಕ ಸಂಗನಗೌಡ ಪಾಟೀಲ ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ದುರಂತ ಘಟನೆ ಸಂಭವಿಸಿದ್ದು, ಅಪಘಾತದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ: ಒಂದೇ ದಿನ 30 ಬೈಕ್ ಗಳ ಪೆಟ್ರೋಲ್ ಕದ್ದ ಕಳ್ಳರು!

ಪ್ರಕರಣ ದಾಖಲಿಸಿಕೊಂಡ ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸೈ ಸಂಜಯ ಕಲ್ಲೂರ ಸಿಬ್ಬಂದಿ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next