Advertisement

ಇಬ್ಬರು ಶಂಕಿತ ಐಸಿಸ್‌ ಉಗ್ರರ ಬಂಧನ

06:00 AM Sep 08, 2018 | |

ಪೊನವದೆಹಲಿ: ಜಮ್ಮು ಕಾಶ್ಮೀರ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಜೆಕೆ) ಭಯೋತ್ಪಾದಕ ಸಂಘಟನೆಯ ಇಬ್ಬರು ಶಂಕಿತರನ್ನು ದೆಹಲಿಯ ಕೆಂಪು ಕೋಟೆಯ ಬಳಿ ಪೊಲೀಸರು ಬಂಧಿಸಿದ್ದಾರೆ. ಪರ್ವೇಜ್‌ (24) ಹಾಗೂ ಜಮಿದ್‌ (19) ಬಂಧಿತರಾಗಿದ್ದು, ಇವರಿಂದ ಎರಡು ಪಾಯಿಂಟ್‌ 32 ಪಿಸ್ತೂಲುಗಳು ಹಾಗೂ ನಾಲ್ಕು ಸೆಲ್‌ ಫೋನ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಉಗ್ರರಾದ ಒಮರ್‌ ಇಬನ್‌ ನಾಝಿರ್‌ ಹಾಗೂ ಆದಿಲ್‌ ಥೋಕರ್‌ ಆಣತಿಯಂತೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬಂಧಿತರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ದೆಹಲಿಯ ಪೊಲೀಸ್‌ ಉಪ ಆಯುಕ್ತ ಪಿ.ಎಸ್‌. ಖುಶ್ವಾಹ, “ಪರ್ವೇಜ್‌ ಹಾಗೂ ಜಮಿದ್‌ ಕಾಶ್ಮೀರದ ಶೋಪಿಯಾನ್‌ ಪ್ರಾಂತ್ಯದವರಾಗಿದ್ದು, ಇವರನ್ನು ಕೆಂಪು ಕೋಟೆಯ ಬಳಿ ಇರುವ ಜಾಮಾ ಮಸೀದಿ ಬಸ್‌ ಸ್ಟಾಪ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.
ಜಮ್ಮು ಕಾಶ್ಮೀರಕ್ಕೆ ಹಿಂದಿರುಗಲು ನಿರ್ಧರಿಸಿದ್ದ ಈ ಇಬ್ಬರೂ ಗುರುವಾರ ರಾತ್ರಿ 10:45ರ ವೇಳೆಗೆ ಬಸ್ಸೊಂದನ್ನು ಹತ್ತುತ್ತಿದ್ದ ವೇಳೆ ಪೊಲೀಸರು 
ಇವರನ್ನು ಬಂಧಿಸಿದ್ದಾರೆ. ತಮ್ಮೆಲ್ಲಾ ಚಟುವಟಿಕೆಗಳಿಗಾಗಿ ಇವರು ದೆಹಲಿ ಮೂಲಕವೇ ಓಡಾಡುತ್ತಿದ್ದರು’ ಎಂದು ತಿಳಿಸಿದ್ದಾರೆ.

ಬಂಧಿತ ಪರ್ವೇಜ್‌ನ ಸಹೋದರ ಸಹ ಉಗ್ರನಾಗಿದ್ದ. ಈತ ಇದೇ ವರ್ಷ ಜ. 26ರಂದು ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ
ಬಲಿಯಾಗಿದ್ದ. ಪರ್ವೇಜ್‌ ಸದ್ಯಕ್ಕೆ ಉತ್ತರ ಪ್ರದೇಶದ ಗಜೊಲದಲ್ಲಿ ಎಂ.ಟೆಕ್‌ ವ್ಯಾಸಂಗ ಮಾಡುತ್ತಿದ್ದಾನೆ. ಆದರೆ, ತನ್ನ ಸಹೋದರನ ಉಗ್ರ ಚಟುವಟಿಕೆಗಳಿಂದ ಸ್ಫೂರ್ತಿ ಪಡೆದಿರುವ ಈತ ತಾನೂ ಉಗ್ರನಾಗಿ ಬದಲಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಂದಹಾಗೆ, ಪರ್ವೇಜ್‌ ಹಾಗೂ ಜಮಿದ್‌ ಅವರದ್ದು ಇದು 2ನೇ ದೆಹಲಿ ಟ್ರಿಪ್‌ ಎಂದ ಖುಶ್ವಾಹ, ರಾಜಧಾನಿಯಲ್ಲಿ ಯಾವುದೇ ವಿಧ್ವಂಸಕ ಕೃತ್ಯಕ್ಕೆ ಇವರು ಸಂಚು ಮಾಡಿರುವ
ಸಾಧ್ಯತೆಗಳಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next