Advertisement

ಪಾಕ್‌ ಪಡೆಗಳಿಂದ ಶೆಲ್‌ ದಾಳಿ:ಇಬ್ಬರು ಬಿಎಸ್‌ಎಫ್ ಯೋಧರಿಗೆ ಗಾಯ 

09:23 AM Jun 29, 2017 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಪೂಂಛ್  ಸೆಕ್ಟರ್‌ನಲ್ಲಿ ಪಾಕಿಸ್ತಾನ ಪಡೆಗಳು ಪುಂಡಾಟ ಮುಂದುವರಿಸಿದ್ದು ಗುರುವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಬಿಎಸ್‌ಎಫ್ ಯೋಧರು ಗಾಯಗೊಂಡಿದ್ದಾರೆ. 

Advertisement

ಗುರುವಾರ ಬೆಳಗ್ಗೆ 1.30 ರ ವೇಳೆ ಪಾಕ್‌ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳು , ಮೋರ್ಟಾರ್‌ಗಳು ಮತ್ತು ಗುಂಡಿನ ಮಳೆ ಸುರಿಸಿ  ಅಪ್ರಚೋದಿತ ದಾಳಿ ಅರಂಭಿಸಿದ್ದು, ಇದಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿರುವುದಾಗಿ ರಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ. 

ಶೆಲ್‌ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next