Advertisement

ನೋಯ್ಡಾ : ಮರದಲ್ಲಿ ನೇತಾಡುತ್ತಿದ್ದ ಸಹೋದರಿಯರ ಶವ, ತನಿಖೆ

11:41 AM Dec 26, 2017 | Team Udayavani |

ಹೊಸದಿಲ್ಲಿ : ನೋಯ್ಡಾ ಸೆಕ್ಟರ್‌ 49ರಲ್ಲಿ ಮರವೊಂದಕ್ಕೆ ನೇಣು ಬಿಗಿದು ನೇತಾಡುತ್ತಿದ್ದ ಸ್ಥಿತಿಯಲ್ಲಿ ಇಬ್ಬರು ಹುಡುಗಿಯರ ಮೃತ ದೇಹ ಪತ್ತೆಯಾಗಿದೆ. ಇವರು ಸಹೋದರಿಯರಾಗಿದ್ದು ಒಬ್ಬಳ ಪ್ರಾಯ 18, ಮತ್ತೂಬ್ಬಳದ್ದು 13 ಎಂದು ಹೇಳಲಾಗಿದೆ.

Advertisement

ಈ ಘಟನೆ ನೋಯ್ಡಾದ ಥಾಣಾ ಸೆಕ್ಟರ್‌ 49ರ ಬರೌಲಾದಲ್ಲಿ ನಡೆದಿದೆ.

ಪೊಲೀಸರು ಹುಡುಗಿಯರ ಶವಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. 

ಸಹೋದರಿಯರು ತಾವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವರೇ ಅಥವಾ ಅವರನ್ನು ಕೊಂದು ನೇಣು ಹಾಕಲಾಗಿದೆಯೇ ಎಂಬುದು ಇನ್ನು ತನಿಖೆಯಲ್ಲಿ ಗೊತ್ತಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next