ಕೆ.ಆರ್.ಪೇಟೆ: ರಾಜ್ಯದೆಲ್ಲಡೆ ಪ್ರವಾಹ ಬಂದಿದ್ದರೂ ತಾಲೂಕಿನ ಕೆರೆಗಳು ಖಾಲಿಯಿದ್ದು ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಾಲೆಗಳು ಒಡೆಯುವ ಭೀತಿ ಇದೆ ಎಂದು ಉದಯ ವಾಣಿ ವರದಿ ಪ್ರಕಟ ಮಾಡಿತ್ತು.
ಅದರಂತೆನಾಲೆ ಗಳಿಗೆ ನೀರು ಬಿಟ್ಟ ದಿನವೆ ತಾಲೂಕಿನ ಎರಡು ಕಡೆಗಳಲ್ಲಿ ಸಮಸ್ಯೆ ಎದುರಾಗಿದ್ದು, ನಿಖರ ವರದಿ ಎಲ್ಲರ ಗಮನ ಸೆಳೆದಿದೆ.
ತಾಲೂಕಿನ ಭಾರತೀಪುರ ನಾಲೆಯನ್ನು ಸುಮಾರು 800 ಕೋಟಿ ರೂ. ಖರ್ಚುಮಾಡಿ ಆಧುನೀಕರಣ ಮಾಡಲಾಗಿದೆ. ಆದರೆ ಆ ನಾಲೆಯ ಏರಿಯೆ ಯಾವುದೇ ಮಳೆ ಗಾಳಿ ಇಲ್ಲದಿದ್ದರೂ ನಾಲೆಗೆ ನೀರು ಬಿಟ್ಟ ತಕ್ಷಣ ಏರಿ ಕುಸಿದು ಬಿದಿದ್ದು ನೀರು ಮುಂದೆ ಸಾಗಲಾಗದೆ ನಾಲೆಯ ಏರಿಯಿಂದ ಹೊರ ಬಂದು ಏರಿಯೇ ಒಡೆದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಅಧಿಕಾರಿಗಳು ತಮ್ಮ ಕಳಪೆ ಕಾಮಗಾರಿಯನ್ನು ಮುಚ್ಚಿಕೊಳ್ಳಲು ಒಂದು ದಿನದ ಮಟ್ಟಿಗೆ ನೀರು ನಿಲ್ಲಿಸಿ ಸಮಸ್ಯೆಯನ್ನು ಬಗೆ ಹರಿಸುತ್ತಿರುವಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಜೊತೆಗೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿಯೂ ಕಿರುನಾಲೆ ಒಡೆದುಹೋಗಿದ್ದು ನೀರು ರಸ್ತೆಯಲ್ಲಿ ಹರಿಯುತ್ತಿದೆ. ತಾಲೂಕಿನ ಎಲ್ಲಾ ನಾಲೆಗಳಿಗೂ ಕಾಲುವೆಗಳ ತುಂಬ ನೀರು ಹರಿಸಿದರೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು ಅಧಿಕಾರಿಗಳು ಮುನ್ನೆಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.