Advertisement

ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ರೋಗಿಗಳ ಕಿತ್ತಾಟ: ಓರ್ವ ಸಾವು

10:40 PM Apr 11, 2021 | Team Udayavani |

ಶಹಾಜಹಾನ್‌ಪುರ: ಉತ್ತರಪ್ರದೇಶದ ಶಹಾಜಹಾನ್‌ಪುರದ ಆಸ್ಪತ್ರೆಯಲ್ಲಿ ಹಾಸಿಗೆ ವಿಚಾರದಲ್ಲಿ ರೋಗಿಗಳ ನಡುವೆಯೇ ಕಿತ್ತಾಟ ನಡೆದು, ಒಬ್ಟಾತ ಜೀವ ಕಳೆದುಕೊಂಡಿದ್ದಾನೆ.

Advertisement

ಜೀವ ಕಳೆದುಕೊಂಡ ಹಂಸರಾಜ ಎಂಬಾತನಿಗೆ ಶನಿವಾರ ಆಸ್ಪತ್ರೆಯಲ್ಲಿ 21ನೇ ಸಂಖ್ಯೆಯ ಹಾಸಿಗೆ ನೀಡಲಾಗಿತ್ತು. ಅಬ್ದುಲ್‌ ರೆಹಮಾನ್‌ ಎಂಬಾತನಿಗೆ 27ನೇ ಸಂಖ್ಯೆಯ ಹಾಸಿಗೆ ನೀಡಲಾಗಿತ್ತು. ಮುಖ ತೊಳೆಯಲು ಹೋಗಿದ್ದ ಅಬ್ದುಲ್‌ ರೆಹಮಾನ್‌ ಮರೆತು ತನ್ನ ಹಾಸಿಗೆಯತ್ತ ಹೋಗುವ ಬದಲು ಹಂಸರಾಜ ಇದ್ದ ಸ್ಥಳಕ್ಕೆ ಬಂದು ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋಗಿ ಹಂಸರಾಜನನ್ನು ಅಬ್ದುಲ್‌ ರೆಹಮಾನ್‌ ಎತ್ತಿ ಹಾಕಿದ್ದಾನೆ. ಹೀಗಾಗಿ, ಆತ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ರೆಹಮಾನ್‌ನನ್ನು ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಅಬ್ದುಲ್‌ ರೆಹಮಾನ್‌ ಮಾನಸಿಕವಾಗಿ ಅಸ್ವಸ್ಥನಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ :“ಲಸಿಕೆ ಉತ್ಸವ’: ಎರಡನೇ ದೊಡ್ಡ ಸಮರ : ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

Advertisement

Udayavani is now on Telegram. Click here to join our channel and stay updated with the latest news.

Next