ಮುಂಬೈ: ಇಬ್ಬರು ಪಾಕಿಸ್ಥಾನಿಗಳು ಮುಂಬೈ ನಗರಕ್ಕೆ ಲಗ್ಗೆಯಿಟ್ಟು ತಾಜ್ ಹೋಟೆಲನ್ನು ಧ್ವಂಸ ಮಾಡುತ್ತಾರೆ ಎಂಬ ಬೆದರಿಕೆ ಕರೆಯೊಂದು ಮುಂಬೈ ಪೊಲೀಸರಿಗೆ ಗುರುವಾರ ಬಂದಿದೆ.
ಮುಂಬೈ ಪೊಲೀಸ್ ನ ಮುಖ್ಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಬಂದಿದ್ದು, ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿ ನಗರದ ಹೆಗ್ಗುರುತಾಗಿರುವ ಹೋಟೆಲನ್ನು ಸ್ಫೋಟಿಸುತ್ತಾರೆ ಎಂದು ತಿಳಿಸಲಾಗಿದೆ.
ಪೊಲೀಸರ ಪ್ರಕಾರ, ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಮುಖೇಶ್ ಸಿಂಗ್ ಎಂದು ಹೇಳಿಕೊಂಡಿದ್ದಾನೆ.
ಆದರೆ, ಆತನ ನಿಜವಾದ ಹೆಸರು ಜಗದಂಬ ಪ್ರಸಾದ್ ಸಿಂಗ್, ಉತ್ತರ ಪ್ರದೇಶದ ಗೊಂಡಾ ಮೂಲದ 35 ವರ್ಷದ ವ್ಯಕ್ತಿಯಾಗಿದ್ದು, ಪ್ರಸ್ತುತ ಮುಂಬೈನ ಸಾಂತಾಕ್ರೂಜ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:Zurich Diamond League: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ನೀರಜ್ ಚೋಪ್ರಾ
ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ ಮೇಲೆ 2008ರಲ್ಲಿ ಉಗ್ರರ ದಾಳಿಗೆ ಗುರಿಯಾಗಿತ್ತು. ಈ ಹಿಂದೆಯೂ ಹೋಟೆಲ್ ಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು.