Advertisement

ಗೂಬೆಯ ಫೋಟೋಗಳಿಗೆ ಫಿದಾ

11:28 PM Jan 20, 2022 | Team Udayavani |

ಮಹಾರಾಷ್ಟ್ರ: ಗೂಬೆಗಳು ಯಾರ ಕಣ್ಣಿಗೆ ಬೀಳುವುದು ಕೂಡ ಇಲ್ಲ. ರಾತ್ರಿ ವೇಳೆಯೇ ಅವುಗಳು ಕೂಗಿ ಭಯ ಹುಟ್ಟಿಸುತ್ತವೆ ಮತ್ತು ಈ ಬಗ್ಗೆ ಹಲವು ರೀತಿಯ ನಂಬಿಕೆ-ಕತೆಗಳಿವೆ.

Advertisement

ಆದರೆ ಇಲ್ಲಿ ಹೇಳಲು ಹೊರಟಿರುವುದು ಬೇರೆಯೇ ವಿಚಾರ. ಮಹಾರಾಷ್ಟ್ರದ ಫೋಟೋಗ್ರಾಫ‌ರ್‌ ಒಬ್ಬರು ಎರಡು ಗೂಬೆಗಳು ಪರಸ್ಪರ ಮಧುರ ಕ್ಷಣಗಳಲ್ಲಿ ಕೂಡಿಕೊಂಡಿರುವ ಅನುಪಮ ಕ್ಷಣಗಳಲ್ಲಿ ಇರುವ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.

ಆ ಎರಡು ಫೋಟೋಗಳನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಮಧುಮಿತಾ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಇದೊಂದು ಮದುವೆಗೆ ಮುಂಚಿನ ಫೋಟೋ ಶೂಟ್‌ ಎಂದು ಭಾವಿಸುವೆ’ ಎಂದು ಶೀರ್ಷಿಕೆ ಬರೆದಿದ್ದಾರೆ. ಟ್ವಿಟರ್‌ನಲ್ಲಿ ಈ ಫೋಟೋಗಳು ಭಾರೀ ಮೆಚ್ಚುಗೆ ಪಡೆದಿವೆ ಮತ್ತು ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next