ರಾಯ್ ಪುರ್: ವರ್ಕ್ ಶಾಪ್ ನಲ್ಲಿ ಬುಲ್ಡೋಜರ್ ಟಯರ್ ಗೆ ಗಾಳಿ ತುಂಬಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಟಯರ್ ಸ್ಫೋಟಗೊಂಡ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ರಾಯ್ ಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ ಡಿಕೆಶಿಯಿಂದ ದೂರವಿರಿ: ರೇಣುಕಾಚಾರ್ಯ ಸಲಹೆ!
ಈ ಘಟನೆ ಮೇ 3ರಂದು ರಾಯ್ ಪುರ್ ನ ಸಿಲ್ಟ್ರಾ ಇಂಡಸ್ಟ್ರೀಯಲ್ ಪ್ರದೇಶದಲ್ಲಿ ಸಂಭವಿಸಿದೆ. ಸಿಸಿಟಿವಿ ಫೂಟೇಜ್ ನಲ್ಲಿ, ಕೆಲಸಗಾರನೊಬ್ಬ ಬುಲ್ಡೋಜರ್ ಟಯರ್ ಗೆ ಗಾಳಿ ತುಂಬಿಸುತ್ತಿದ್ದ. ಸ್ವಲ್ಪ ಸಮಯದ ನಂತರ ಮತ್ತೊಬ್ಬ ವ್ಯಕ್ತಿ ಬಂದು ಟಯರ್ ಗಾಳಿಯ ಪ್ರಮಾಣ ಪರೀಕ್ಷಿಸಲು ಒತ್ತುತ್ತಿದ್ದ ವೇಳೆಯಲ್ಲಿ ಟಯರ್ ಸ್ಫೋಟಗೊಂಡಿದ್ದು, ಇಬ್ಬರು ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿರುವ ದೃಶ್ಯ ಸೆರೆಯಾಗಿದೆ.
ಇಬ್ಬರು ಕೆಲಸಗಾರರು ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿಗಳು. ಮೃತರನ್ನು ರಾಜ್ ಪಾಲ್ ಸಿಂಗ್ ಮತ್ತು ಪ್ರಂಜನ್ ನಾಮ್ ದೇವ್ ಎಂದು ಗುರುತಿಸಲಾಗಿದೆ ಎಂದು ವರದಿ ಹೇಳಿದೆ.
ಟಯರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.