ಪೊಲೀಸರು, ಕೋಟ್ಯಂತರ ರೂ. ಮೌಲ್ಯದ ಜಮೀನು ಕಬಳಿಸಲು ನಡೆದ ಎರಡು ಕೊಲೆ ಪ್ರಕರಣಗಳನ್ನು ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಜತೆಗೆ, ಜಮೀನು ಕಬಳಿಕೆ ಸಂಚಿನ ಫಲವಾಗಿ ಮಾಡಿದ ಕೊಲೆ ರಹಸ್ಯ ಪತ್ನಿಗೆ ತಿಳಿದ ಕಾರಣ ಆಕೆಯನ್ನೂ ಕೊಂದ ಪತಿ, ವೈದ್ಯ, ಸಂಘಟನೆಯೊಂದರ ಮುಖಂಡ ಸೇರಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ಳತೂರು ರಮೇಶ್, ಸಾಹುಕಾರ್ ಶಂಕರಪ್ಪ, ನಿಂಬೆಕಾಯಿಪುರದ ವೆಂಕಟಸ್ವಾಮಿ, ಡಾ.ಕುಲಕರ್ಣಿ, ಕೇಶವಮೂರ್ತಿ, ವೆಂಕಟೇಶ್, ಎಸ್.ಕೃಷ್ಣಮೂರ್ತಿ, ಧನಂಜಯ್, ಕೃಷ್ಣಪ್ಪ ಬಂಧಿತರು.
Related Articles
Advertisement
ಇದರಿಂದ ಕಂಗಾಲಾದ ರಮೇಶ್ ಮತ್ತೂಬ್ಬ ಆರೋಪಿ ಶಂಕರಪ್ಪನ ಸಹಾಯ ಕೋರುತ್ತಾನೆ. ಇದಕ್ಕೆ ಸಹಕರಿಸುವ ಶಂಕರಪ್ಪ, ಮನೆಯಲ್ಲಿ ಜಗಳವಾಡಿಕೊಂಡು ಬಂದಿದ್ದ ಮುಳಬಾಗಿಲು ಮೂಲದ ವೆಂಕಟರಮಣಪ್ಪ ನನ್ನೇ ಹೋಲುವ ಕೃಷ್ಣಪ್ಪ ಎಂಬಾತನನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತರುತ್ತಾರೆ.
ಬಳಿಕ ಆತನಿಗೆ ಮದ್ಯದಲ್ಲಿ ಬೇಧಿ ಮಾತ್ರೆ ಬೆರೆಸಿ ತೀವ್ರ ಅಸ್ವಸ್ಥನಾಗಿ ಮೃತಪಡುವಂತೆ ಮಾಡುತ್ತಾರೆ. ಬಳಿಕ ಆತನನ್ನು ಮಾರಗೊಂಡನಹಳ್ಳಿಯ ಅಮೃತ್ ಮೆಡಿಕಲ್‌ಗೆ ದಾಖಲಿಸಿ ಪೂರ್ವ ನಿಯೋಜಿತ ಸಂಚಿನಂತೆ ಡಾ. ಕುಲಕರ್ಣಿಯಿಂದ ಮರಣ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಾರೆ.
ಆರೋಪಿಗಳಿಗೆ ಕಾಡಿತ್ತು ದೆವ್ವದ ಭಯಅನಾಮಿಕ ಕೃಷ್ಣಪ್ಪನ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿದ ಆರೋಪಿಗಳು ಆತ ದೆವ್ವವಾಗಿ ಕಾಡಬಹುದು ಎಂದು ಭಯಗೊಂಡಿದ್ದಾರೆ. ಬಳಿಕ ಆತನ ಚಿತಾ ಭಸ್ಮವನ್ನು ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಿದ್ದಾರೆ. ಜತೆಗೆ, ಆತನ ಸಾವಿಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸುವಂತೆ ವೆಂಕಟಸ್ವಾಮಿಗೆ ಸೂಚಿಸಿದ್ದರು. ಇತ್ತೀಚೆಗೆ ಮನೆಗೆ ತಡವಾಗಿ ಹೋಗುತ್ತಿದ್ದ ಗಂಡ ವೆಂಕಟಸ್ವಾಮಿಯನ್ನು ಪತ್ನಿ ಸುಧಾರಾಣಿ ಪ್ರಶ್ನಿಸಿದಾಗ ಕೃಷ್ಣಪ್ಪನ ಕೊಲೆ ಬಗ್ಗೆ ಹೇಳಿದ್ದ. ನಂತರ ಸೆ.18ರಂದು ಕಂಠಪೂರ್ತಿ ಕುಡಿದು ಬಂದಿದ್ದ ವೆಂಕಟಸ್ವಾಮಿ, ಪತ್ನಿಗೆ ಕೊಲೆ ವಿಷಯ ತಿಳಿದಿದೆ. ಬೇರೆ ಯಾರಿಗಾದರೂ ಹೇಳಿಬಿಡುತ್ತಾಳೆ ಎಂದು ಭಯಗೊಂಡು ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೈದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದ. ಅನುಮಾನಗೊಂಡು ಆತನನ್ನು ವಿಚಾರಣೆಗೊಳಿಸಿದಾಗ ಇಡೀ ಪ್ರಕರಣ ಬಯಲಾಗಿದೆ.