ಮುಂಬಯಿ: ಮುಂಬಯಿ ಪೊಲೀಸ್ ಪಡೆಯ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಸುಮಾರು ಆರು ವರ್ಷಗಳಿಂದ ಕೆಲಸಕ್ಕೆ ಹಾಜರಾಗದೆ ವೇತನ ಪಡೆಯುತ್ತಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಹೆಚ್ಚಿನ ತನಿಖೆಯ ಮಾಹಿತಿ ತಿಳಿದ ನಂತರ ಇಬ್ಬರನ್ನು ವಜಾ ಮಾಡಲಾಯಿತು. ಕಾನ್‌ಸ್ಟೇಬಲ್‌ಗಳಾದ ರಾಮಲಾಲ್ ದಿಗಂಬರ ಮಂಜುಲೆ ಮತ್ತು ಸಮದ್ ಸಲೀಮ್ ಶೇಖ್ ಅವರನ್ನು 2012 ರಲ್ಲಿ ಮಲಾºರ್ ಹಿಲ್ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ವಿಭಾಗದಿಂದ ವರ್ಗಾಯಿಸಲಾಯಿತು. ಅಂದಿನಿಂದ ಇಬ್ಬರು ಗೈರುಹಾಜರಾಗಿದ್ದರೂ ಎಂದು ತಿಳಿದು ಬಂದಿದೆ.
2012 ರ ಜೂನ್ 7 ಮತ್ತು 8 ರಂದು ಸ್ಥಳೀಯ ಶಸ್ತ್ರಾಸ್ತ್ರ ಇಲಾಖೆಯಿಂದ ಮಲ್‌ಬಾರ್ ಹಿಲ್‌ಠಾಣೆಗೆ ವರ್ಗಾವಣೆ ಮಾಡಲಾಯಿತು. ಆದರೆ ಮಂಜುಲೆ ಮತ್ತು ಶೇಖ್ ಅವರು ಮಲಬಾರ್ ಹಿಲ್ ಪೊಲೀಸ್ ಠಾಣೆಗೆ ಹಾಜರಿಯಾಗಲಿಲ್ಲ. ಅವರು ಕೆಲಸಕ್ಕೆ ಹಾಜರಾಗದಿದ್ದರೂ, ಅವರಿಗೆ 6 ವರ್ಷಗಳಿಂದ ಸಂಬಳವನ್ನು ಪಡೆಯುತ್ತಿದ್ದಾರೆ ಎಂದು 2018 ರ ಆರಂಭದಲ್ಲಿ ಪೊಲೀಸ್ ಇಲಾಖೆ ಅರಿತುಕೊಂಡಿದೆ. ಅವರ ಸಂಬಳವನ್ನು ತಡೆಹಿಡಿಯಲಾಯಿತು ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಯಿತು.
ಈ ವೇಳೆ ಅವರು ಹಿರಿಯ ಅಧಿಕಾರಿಗಳಿಂದ ಯಾವುದೇ ಮುನ್ಸೂಚನೆ ಪಡೆಯದೆ ಇಬ್ಬರೂ ಕಾನ್‌ಸ್ಟೇಬಲ್ ಕೆಲಸಕ್ಕೆ ಗೈರುಹಾಜರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಂತರ ಅವರಿಗೆ ಅಫಿದವಿತ್ ಸಲ್ಲಿಸುವಂತೆ ಸೂಚನೆಗಳನ್ನು ನೀಡಲಾಯಿತು. ಮೊದಲಿಗೆ ನೋಟಿಸ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ 2021ಮಾರ್ಚ್ 21 ರಂದು ಶೇಖ್ ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದರು.
ಇಲಾಖಾ ವಿಚಾರಣೆಯ ವೇಳೆ ಮಂಜುಲೆ ಅವರನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವಿಚಾರಣೆ ವೇಳೆ ಶೇಖ್ ಕಾಣಿಸಿಕೊಂಡರೂ ನೀಡಿದ ಹೇಳಿಕೆ ಆಸಮಾಧಾನವಾಗಿದ್ದು, ಇಬ್ಬರು ಕಾನ್‌ಸ್ಟೇಬಲ್‌ಗಳು ಮಹಾರಾಷ್ಟ್ರ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿಚಾರಣೆಯಲ್ಲಿ ತೀರ್ಮಾನಿಸಲಾಗಿದೆ. ನಂತರ ಅವರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಮುಂಬಯಿ ಪೊಲೀಸ್ (ಶಿಕ್ಷೆ ಮತ್ತು ಮೇಲ್ಮನವಿ) ಕಾಯ್ದೆ 1956 ರ ನಿಯಮ 3 ರ ಅಡಿಯಲ್ಲಿ ಮಂಜುಲೆ ಮತ್ತು ಶೇಖ್ ಅವರನ್ನು ಕೆಲಸದಿಂದ ವಜಾಗೊಳಿಸಲು ಆದೇಶಿಸಲಾಯಿತು.
ನನಗೆ 2011 ರಲ್ಲಿ ಅಪಘಾತ ಸಂಭವಿಸಿದೆ. ವೈದ್ಯಕೀಯ ಚಿಕಿತ್ಸೆ ಪಡೆದ ನಂತರ, ನಾನು ಕೆಲಸಕ್ಕೆ ಮರಳಿದೆ, ಆದರೆ 2012 ರಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ನಾನು ಪ್ರಜ್ಞೆ ಕಳೆದುಕೊಂಡೆ. ನಾನು ನೀಡಿದ ಉತ್ತರಕ್ಕೆ ವೈದ್ಯಕೀಯ ವರದಿಗಳನ್ನು ಲಗತ್ತಿಸಲಾಗಿದೆ ಎಂದು ಶೇಖ್ ತಿಳಿಸಿದ್ದಾರೆ.