Advertisement

ಒಂದು ತಿಂಗಳು ಎರಡು ಸಿನಿಮಾ

11:09 AM Jan 09, 2018 | |

ಡಿಸೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. “ಅಂಜನಿಪುತ್ರ’ ಹಾಗೂ “ಚಮಕ್‌’ ಬಿಡುಗಡೆಯಾಗುವ ಮೂಲಕ ಡಿಸೆಂಬರ್‌ ರಶ್ಮಿಕಾಗೆ ಅದೃಷ್ಟದ ತಿಂಗಳಾಗಿತ್ತು. ಈಗ ಮತ್ತೂಬ್ಬ ನಾಯಕಿ ಕೂಡಾ ಜನವರಿಯನ್ನು ಅದೃಷ್ಟ ತಿಂಗಳು ಎಂದುಕೊಂಡಿದ್ದಾರೆ. ಅವರೇ ಅವಂತಿಕಾ ಶೆಟ್ಟಿ. ಹೌದು, ಜನವರಿಯಲ್ಲಿ ಅವಂತಿಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಅವಂತಿಕಾ ಜನವರಿ ತಿಂಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.

Advertisement

ಅವಂತಿಕಾ ನಟಿಸಿರುವ “ರಾಜು ಕನ್ನಡ ಮೀಡಿಯಂ’ ಹಾಗೂ “ರಾಜರಥ’ ಚಿತ್ರಗಳು ಈ ತಿಂಗಳು ಬಿಡುಗಡೆಯಾಗಲಿದೆ. ಎರಡೂ ಚಿತ್ರಗಳಲ್ಲೂ ಅವಂತಿಕಾಗೆ ವಿಭಿನ್ನವಾದ ಪಾತ್ರ ಸಿಕ್ಕಿರುವುದರಿಂದ ಅವರು ಖುಷಿಯಾಗಿದ್ದಾರೆ. “ರಂಗಿತರಂಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅವಂತಿಕಾ ಶೆಟ್ಟಿ ನಟಿಸಿರುವ “ಕಲ್ಪನಾ 2′ ಚಿತ್ರ ಬಿಡುಗಡೆಯಾಗಿದೆ. ಅದು ಬಿಟ್ಟರೆ ಬೇರೆ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಈಗ ಒಂದೇ ತಿಂಗಳಲ್ಲಿ ಎರಡು ಚಿತ್ರಗಳು ತೆರೆಗೆ ಬರುತ್ತಿವೆ.

ಅವಂತಿಕಾ ನಟಿಸಿರುವ “ರಾಜು ಕನ್ನಡ ಮೀಡಿಯಂ’ ಚಿತ್ರ ಜನವರಿ 29 ರಂದು ಬಿಡುಗಡೆಯಾಗುತ್ತಿದೆ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಲವ್‌ಸ್ಟೋರಿಯನ್ನು ಹೊಂದಿರುವ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. “ಫ‌ಸ್ಟ್‌ರ್‍ಯಾಂಕ್‌ ರಾಜು’ ಚಿತ್ರದಲ್ಲಿ ನಾಯಕರಾಗಿದ್ದ ಗುರುನಂದನ್‌ “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. “ಫ‌ಸ್ಟ್‌ರ್‍ಯಾಂಕ್‌ ರಾಜು’ ಚಿತ್ರವನ್ನು ನಿರ್ದೇಶಿಸಿದ್ದ ನರೇಶ್‌ ಈ ಚಿತ್ರದ ನಿರ್ದೇಶಕರು.

“ಶಿವಲಿಂಗ’ ಚಿತ್ರ ನಿರ್ಮಿಸಿದ ಕೆ.ಎ.ಸುರೇಶ್‌ ನಿರ್ಮಾಣದ ಈ ಚಿತ್ರದ ಟ್ರೇಲರ್‌ ಈಗಗಾಲೇ ಹಿಟ್‌ ಆಗಿದೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ಸುದೀಪ್‌ ಕೂಡಾ ನಟಿಸಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಸುದೀಪ್‌ ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವಂತಿಕಾ ಅವರಿಗೆ ವಿಭಿನ್ನ ಪಾತ್ರ ಸಿಕ್ಕಿದ್ದು, ಈ ಚಿತ್ರದ ಮೇಲೂ ಅವಂತಿಕಾಗೆ ವಿಶ್ವಾಸವಿದೆ.

ಇನ್ನು, “ರಂಗಿತರಂಗ’ ತಂಡವೇ “ರಾಜರಥ’ ಮಾಡಿದ್ದು, ಅವಂತಿಕಾ ಶೆಟ್ಟಿಯವರನ್ನೇ ನಾಯಕಿಯಾಗಿ ಮುಂದುವರೆಸಿದೆ. ನಿರೂಪ್‌ ಭಂಡಾರಿಗೆ ಜೋಡಿಯಾಗಿ ನಟಿಸಿರುವ ಅವಂತಿಕಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿರೋದಂತು ಸುಳ್ಳಲ್ಲ. ಈಗಾಗಲೇ ಚಿತ್ರದ ಟ್ರೇಲರ್‌ ಹಿಟ್‌ ಆಗಿದ್ದು, ಸಿನಿಮಾವನ್ನೂ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಅವಂತಿಕಾಗಿದೆ. ಚಿತ್ರ ಜನವರಿ 25 ರಂದು ತೆರೆಕಾಣುತ್ತದೆ ಎನ್ನಲಾಗಿದೆ. ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next