Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ದೃಢ

08:35 AM May 18, 2020 | keerthan |

ಮಂಗಳೂರು: ಕೋವಿಡ್-19 ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೆ ಇಬ್ಬರು ಒಳಗಾಗಿದ್ದಾರೆ. ಒಬ್ಬರು ಮುಂಬೈನಿಂದ ಬಂದವರಾಗಿದ್ದರೆ, ಮತ್ತೊಬ್ಬರ ಸೋಂಕು ಮೂಲ ಇನ್ನೂ ನಿಗೂಢ.

Advertisement

ಜಿಲ್ಲೆಯ 31 ವರ್ಷದ ಯುವಕನೋರ್ವನಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು, ಈತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಮಂಗಳೂರಿನ ಜೆಪ್ಪುನ ಮೊಗೆರು ನಿವಾಸಿಯಾಗಿದ್ದು, ಅನುಮಾನ ಬಂದು ಕೊವಿಡ್ ಟೆಸ್ಟ್ ಗೆ ಒಳಗಾಗಿದ್ದರು. ಇವರು ಕೋವಿಡ್ ಆಸ್ಪತ್ರೆಗೆ ಬಂದು ಸ್ವಯಂ ಪರೀಕ್ಷೆಗೆ ಒಳಗಾಗಿದ್ದರು. ಈತನಿಗೆ ಸೋಂಕು ತಾಗಿದ್ದು ಹೇಗೆ ಎಂದು ಪತ್ತೆ ಮಾಡಲಾಗುತ್ತಿದೆ.

ಮತ್ತೋರ್ವ ಸೋಂಕಿತೆ 35 ವರ್ಷದ ಮಹಿಳೆಯಾಗಿದ್ದು, ಈಕೆ  ಮೇ 14ರಂದು ಮಹಾರಾಷ್ಟ್ರದಿಂದ ಬಂದಿದ್ದರು. ಇವರು ಮಂಗಳೂರಿನ ಯಯ್ಯಾಡಿ ಮೂಲದವರಾಗಿದ್ದು,  ಮಹಿಳೆ, ಆಕೆಯ ಪತಿ ಮತ್ತು ಮಗು ಕ್ವಾರಂಟೈನ್ ನಲ್ಲಿದ್ದರು. ಇವರಿಗೆ ಮಂಗಳೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಶನಿವಾರ ಸಂಜೆಯ ನಂತರ 54 ಸೋಂಕು ಪ್ರಕರಣಗಳು ದಾಖಲಾಗಿದೆ. ಇದಿರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next