Advertisement

ಚಿತ್ರದುರ್ಗದಲ್ಲಿ ಮೂರು ವರ್ಷದ ಮಗಳು ಹಾಗೂ ತಂದೆಗೆ ಕೋವಿಡ್ 19 ಸೋಂಕು

03:19 PM May 15, 2020 | keerthan |

ಚಿತ್ರದುರ್ಗ: ತಬ್ಲಿಘಿ ನಂಟಿನ ನಂತರ ‌ಚಿತ್ರದುರ್ಗ ಜಿಲ್ಲೆಗೆ ತಮಿಳುನಾಡಿನಿಂದ ಎರಡು ಕೋವಿಡ್ 19 ಸೋಂಕು ದೃಢಪಟ್ಟಿವೆ.

Advertisement

ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿಯ ಮೂರು ವರ್ಷದ ಮಗಳು ಸೋಂಕಿತ ಸಂಖ್ಯೆ 994 ಹಾಗೂ ಆಕೆಯ 39 ವರ್ಷದ ತಂದೆ ಸೋಂಕಿತ ಸಂಖ್ಯೆ 994 ಸೋಂಕು ತಗುಲಿದೆ.

ಇಬ್ಬರನ್ನೂ ಚಿತ್ರದುರ್ಗ ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಾಕ್ ಡೌನ್ ಘೋಷಣೆಗೂ ಮೊದಲು ಸಂಬಂಧಿಕರನ್ನು ನೋಡಲು ಚೆನ್ನೈಗೆ ತೆರಳಿ ಮೇ. 5 ರಂದು ವಾಪಾಸಾಗಿದ್ದರು.

ವಾಪಾಸಾದ ಬಳಿಕ ಕುಟುಂಬದ ಮೂವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು ಎನ್ನಲಾಗಿದೆ.

Advertisement

ಈ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ 9 ಪ್ರಕರಣಗಳಾಗಿದ್ದು, ಇದರಲ್ಲಿ ಭೀಮಸಮುದ್ರದ ಮಹಿಳೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಎಂಟು ಸಕ್ರೀಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇಂದು 45 ಸೋಂಕು ಪ್ರಕರಣ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1032ಕ್ಕೆ ಏರಿದೆ. ಇದರಲ್ಲಿ 520 ಪ್ರಕರಣಗಳು ಆಕ್ಟಿವ್ ಇದ್ದು, 35 ಜನರು ಮೃತಪಟ್ಟಿದ್ದಾರೆ. 476 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಕೋವಿಡ್ ಅಲ್ಲದ ಕಾರಣದಿಂದ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next