Advertisement

ವಿಜಯಪುರ ಯೂಟ್ಯೂಬ್‌ ಚಾನಲ್ ಕ್ಯಾಮರಾಮನ್ ಸೇರಿ ಮತ್ತೆ ಇಬ್ಬರಿಗೆ ಕೋವಿಡ್ ಸೋಂಕು

08:08 AM Apr 28, 2020 | keerthan |

ವಿಜಯಪುರ: ನಗರದಲ್ಲಿ ಸೋಮವಾರ ಮತ್ತೆ ಇಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41 ಕ್ಕೆ ಏರಿದೆ.

Advertisement

ಸೋಮವಾರ ಬೆಳಗಿನ ಹೆಲ್ತ್ ಬುಲಿಟಿನ್ ನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, P221 ಸೋಂಕಿತೆಯಿಂದ 45 ವರ್ಷದ P510 ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆದರೆ ಹೊಸದಾಗಿ ಸೋಂಕು ದೃಢಪಟ್ಟಿರುವ 27 ವರ್ಷದ P511 ಯುವಕನ ಸಂಪರ್ಕ ಪತ್ತೆ ತಲೆನೋವಾಗಿದೆ.

P511 ಸೋಂಕಿತ ಯುವಕ ಯುಟ್ಯೂಬ್ ಚಾನಲ್ ಕ್ಯಾಮರಾಮನ್ ಆಗಿದ್ದು, ಜಿಲ್ಲಾಡಳಿತ ಈತನ ಸೋಂಕು ಸಂಪರ್ಕ ಪತ್ತೆಗಾಗಿ ಟ್ರಾವೆಲ್ ಹಿಸ್ಟರಿ ಸಂಗ್ರಹಕ್ಕೆ ಮುಂದಾಗಿದೆ.

ಸದರಿ ಯುವಕನೊಂದಿಗೆ ನಗರದ ಐತಿಹಾಸಿಕ ಬಾರಾಕಮಾನ್ ಪ್ರದೇಶದ ಮೂಲಕ ಹೊಸದಾಗಿ ಮತ್ತೊಂದು ಪ್ರದೇಶಕ್ಕೆ ಸೋಂಕು ವಿಸ್ತರಣೆಯಾಗಿದೆ. ಸದರಿ ಪ್ರದೇಶ ‌ಜನರಲ್ಲಿ ಆತಂಕ ಮನೆ ಮಾಡಿದೆ.

ನಗರದಲ್ಲಿ ಮೊದಲ ಸೋಂಕಿತೆ ವಿಶ್ವವಿಖ್ಯಾತ ಐತಿಹಾಸಿಕ ಗೋಲಗುಮ್ಮಟ ಪ್ರದೇಶದ ಚಪ್ಪರಬಂದ್ ಕಾಲೋನಿ ಪ್ರದೇಶಕ್ಕೆ ಸೀಮಿತವಾಗಿತ್ತು. ಹೀಗಾಗಿ ನಗರದಲ್ಲಿ ಛಪ್ಪರಬಂದ್, ಬಡಿಕಮಾನ್ ಪ್ರದೇಶದ ಹಲವು ಗಲ್ಲಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

Advertisement

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಸೋಂಕಿತರು ಪತ್ತೆಯಾಗಿರದೇ, ಭಾನುವಾರ ಜಿಲ್ಲೆಯ ಮೊದಲ ಸೋಂಕಿತ ವೃದ್ಧೆ ಸಂಪೂರ್ಣ ಗುಣಮುಖಳಾಗಿ ಮನೆಗೆ ತೆರಳುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕುಸಿತವಾಗಿತ್ತು.

ಇದರ ಬೆನ್ನಲ್ಲೇ ಮೊದಲ ಸೋಂಕಿತೆ ಸಂಪರ್ಕದಿಂದ ಒಂದು ಹಾಗೂ ಸಂಪರ್ಕದ ಪ್ರಾಥಮಿಕ ಮಾಹಿತಿ ಇಲ್ಲದ ಯೂಟ್ಯೂಬ್ ಚಾನಲ್‌ ಕ್ಯಾಮರಾಮನ್ ಗೆ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್-19 ತಣ್ಣಗಾಗುತ್ತಿದೆ ಎನ್ನುವಾಗಲೇ ಮತ್ತಿಬ್ಬರಲ್ಲಿ ಸೋಂಕು ದೃಢಪಟ್ಟಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next