Advertisement

ವೇಶ್ಯಾವಾಟಿಕೆಗೆ ಕಳ್ಳಸಾಗಣೆ: ಅಸ್ಸಾಂ ಹುಡುಗಿಯರಿಬ್ಬರ ರಕ್ಷಣೆ

11:22 AM Jun 18, 2018 | Team Udayavani |

ಮಾಲ್ಡಾ, ಪಶ್ಚಿಮ ಬಂಗಾಲ : ಉದ್ಯೋಗದ ಆಮಿಷದಲ್ಲಿ  ವೇಶ್ಯಾವಾಟಿಕೆಗಾಗಿ ಕಳ್ಳಸಾಗಣೆಗೆ ಒಳಗಾಗಿದ್ದ 12 ಮತ್ತು 13 ವರ್ಷ ಪ್ರಾಯದ ಅಸ್ಸಾಮಿನ ಇಬ್ಬರು ಹುಡುಗಿಯರನ್ನು ಕಾಮರೂಪ್‌ ಎಕ್ಸ್‌ಪ್ರೆಸ್‌ ರೈಲಿನಿಂದ ಪಾರುಗೊಳಿಸಲಾಗಿದೆ ಎಂದು ಜಿಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹುಡುಗಿಯರಿಬ್ಬರನ್ನು ಕಳ್ಳಸಾಗಣೆ ಮಾಡಲಾಗುತ್ತಿರುವ ಬಗ್ಗೆ ಖಚಿತ ಸುಳಿವು ಪಡೆದ ಜಿಆರ್‌ಪಿ ಸಿಬಂದಿಗಳು ಹೌರಾ ಗೆ ಹೋಗುತ್ತಿದ್ದ ರೈಲಿನಲ್ಲಿ ಶೋಧ ಕಾರ್ಯ ನಡೆಸಿ ಆ ಹುಡುಗಿಯರನ್ನು ಪಾರುಗೊಳಿಸಿದರು. 

ಈ ಹುಡುಗಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದ 49 ವರ್ಷ ಪ್ರಾಯದ ಇಂದ್ರಾಣಿ ಸರ್ಕಾರ್‌ ಎಂಬ ಮಹಿಳೆಯನ್ನು ಜಿಆರ್‌ಪಿ ಅಧಿಕಾರಿಗಳ ತಂಡ ಬಂಧಿಸಿತು. 

ಅಸ್ಸಾಂ ನ ತೀನ್‌ಸುಖೀಯಾ ಜಿಲ್ಲೆಯವರಾಗಿರುವ ಈ ಇಬ್ಬರು ಹುಡುಗಿಯರನ್ನು ಆರೋಪಿ ಮಹಿಳೆಯು ಕೋಲ್ಕತಕ್ಕೆ ಒಯ್ಯುತ್ತಿದ್ದಳು. ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪಾರು ಮಾಡಲ್ಪಟ್ಟ ಹುಡುಗಿಯರನ್ನು ಸರಕಾರದ ಮಹಿಳೆಯರು ಮತ್ತು ಮಕ್ಕಳ ಆಸರೆ ಕೇಂದ್ರಕ್ಕೆ ಕಳುಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next