Advertisement
ನಕಲಿ ಪತ್ರಕರ್ತ, ಮಂಗಳೂರು ಮೂಲದ ಅಮೂಲ್ ಹಸನ್ (23) ಮತ್ತು ರಾಕೇಶ್ (26) ಬಂಧಿತರು. ಇವರಿಂದ 3,200 ರೂಪಾಯಿ ಮೌಲ್ಯದ ಒಂದು ಕೆ.ಜಿ. ತೂಕದ ಚರಸ್, ನಗದು ಮತ್ತು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಮಂಗಳೂರು, ಬೀದರ್ ಮತ್ತು ಒಡಿಶಾದಿಂದ ಚರಸ್ ಮತ್ತು ಗಾಂಜಾವನ್ನು ತರಿಸುತ್ತಿದ್ದು, ಇದನ್ನು ಗ್ರಾಹಕರ ಆದ್ಯತೆ ಮೇರೆಗೆ ಪ್ಯಾಕೆಟ್‌ಗಳ ಮೂಲಕ ಸಿದ್ಧಪಡಿಸಿ ಪ್ರತ್ಯೇಕ ವೆಬ್‌ಸೈಟ್ ಹಾಗೂ ಫೇಸ್‌ಬುಕ್ ಪೇಜ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
ಹಸನ್ ಪತ್ರಕರ್ತ ಹಾಗೂ ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಂಡು ನಗರದ ಪೊಲೀಸ ಠಾಣೆಗಳು ಮತ್ತು ಸಿಸಿಬಿ ಅಧಿಕಾರಿಗಳನ್ನು ಭೇಟಿ ಪರಿಚಯಿಸಿಕೊಳ್ಳುತ್ತಿದ್ದ. ಈ ವೇಳೆ ಮಾದಕ ವಸ್ತು ಮಾರಾಟ ದಂಧೆ ಮತ್ತು ತಪ್ಪಿಸಿಕೊಳ್ಳುವ ರೀತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿ, ಇತ್ತೀಚೆಗೆ ಕಸ್ತೂರ ಬಾ ರಸ್ತೆಯಲ್ಲಿರುವ ಐಷಾರಾಮಿ ಹೊಟೇಲ್‌ವೊಂದಕ್ಕೆ ಭೇಟಿ ನೀಡಿದ್ದ. ಇಲ್ಲಿ ಸಿಗುವ ಮಾದಕ ವಸ್ತುಗಳ ಮಾರಾಟದ ಬಗ್ಗೆ ಅಲ್ಲಿನ ಸಿಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದ. ಇದನ್ನೇ ಬಂಡವಾಳವಾಗಿ ಮಾಡಿಕೊಂಡು ರಾಕೇಶ್‌ನನ್ನು ಸಂಪರ್ಕಿಸಿ ನಗರದಲ್ಲಿ ಬೃಹತ್ ಮಾದಕ ವಸ್ತು ಜಾಲ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ವೆಬ್‌ಸೈಟ್ ಕ್ರಿಯೆಟ್ ಮಾಡಿದ್ದ ಪೊಲೀಸರು ಇತ್ತ ಹೆಚ್ಚಾಗಿ ನಡೆಯುತ್ತಿದ್ದ ಆನ್‌ಲೈನ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ತಂತ್ರ ರೂಪಿಸಿದ್ದರು. ಅದರಂತೆ ವೆಬ್‌ಸೈಟ್ ಮತ್ತು ಫೇಸ್‌ಬುಕ್‌ನಲ್ಲಿ ಅಕೌಂಟ್‌ಗಳನ್ನು ಕ್ರಿಯೆಟ್ ಮಾಡಿದರು. ಬಳಿಕ ಆರೋಪಿ ಹಸನ್‌ನನ್ನು ಈ ಮೂಲಕ ಸಂಪರ್ಕಿಸಿದ್ದರು. ಅಷ್ಟೇ ಅಲ್ಲದೇ ಆನ್‌ಲೈನ್‌ನಲ್ಲೇ ಮಾದಕ ವಸ್ತುಗಳ ಖರೀದಿಗೆ ಮುಂದಾದರು. ಆದರೆ, ಆರಂಭದಲ್ಲಿ ಬಹಳ ಜಾಗರೂಕತೆಯಿಂದ ವರ್ತನೆ ತೋರಿದ ಹಸನ್, ಗ್ರಾಹಕರ ಮೊಬೈಲ್ ನಂಬರ್‌ಗಳನ್ನು ಪಡೆದು ಟ್ರೂಕಾಲರ್‌ನಲ್ಲಿ ಹೆಸರುಗಳನ್ನು ಪರಿಶೀಲಿಸುತ್ತಿದ್ದ. ಜತೆಗೆ ಪೊಲೀಸರು ಸೃಷ್ಟಿಸಿದ್ದ ಖಾತೆಗಳ ಬಗ್ಗೆ ಶಂಕಿಸಿದ್ದ. ಇದನ್ನು ಅರಿತ ಪೊಲೀಸರು ತಮ್ಮ ಖಾತೆಗಳಲ್ಲಿ ಮಾದಕ ವ್ಯಸನ ಮಾಡುತ್ತಿರುವ ಮತ್ತು ಐಷಾರಾಮಿ ಪಾರ್ಟಿಯಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಫೋಟೋ ಮತ್ತು ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದನ್ನು ಖಾತರಿ ಪಡಿಸಿಕೊಂಡ ಆರೋಪಿ ಕೊನೆಗೆ ಮಾದಕ ವಸ್ತು ಕೂಡಲು ನಿರ್ಧರಿಸಿದ್ದ. ಬಳಿಕ ಮೊದಲೇ ಪ್ಲಾನ್‌ನಂತೆ ತನಿಖಾ ತಂಡ ಹಸನ್ ಸೂಚಿಸಿದ ಸ್ಥಳಕ್ಕೆ ಅಪರಿಚಿತ ಯುವಕನೊಬ್ಬನನ್ನು ಕಳುಹಿಸಿ ಮಾಲು ಸಮೇತ ಬಂಧಿಸಲಾಯಿತು ಎಂದು ಅವರು ಅಧಿಕಾರಿಯೊಬ್ಬರು ತಿಳಿಸಿದರು.
ಗಿಫ್ಟ್ಬಾಕ್ಸ್‌ನಲ್ಲಿ ಮಾದಕ ವಸ್ತುಹಸನ್ ಬಂಧಿಸಿದ ಬಳಿಕ ಈತನ ಮಾಹಿತಿಯನಾ ° ಧರಿಸಿ ರಾಕೇಶ್‌ನ ಬಂಧನಕ್ಕೆ ಬಲೆ ಬೀಸಿದ ವಿಶೇಷ ತಂಡ ಮೊಬೈಲ್ ಮೂಲಕ ಈತನನ್ನು ಸಂಪರ್ಕಿಸಿ ಚರಸ್ ತರುವಂತೆ ಸೂಚಿಸಿತ್ತು. ಅದರಂತೆ ಆರೋಪಿ ಗಿಫ್ಟ್ ಬಾಕ್ಸ್‌ನಲ್ಲಿ ಒಂದು ಕೆ.ಜಿ.ಚರಸ್ ಅನ್ನು ಬಸ್ ಮೂಲಕ ನಗರಕ್ಕೆ ತಂದಿದ್ದ. ಈತ ಬಸ್ ನಿಲ್ದಾಣದಲ್ಲಿರುವಾಗಲೇ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಯಿತು. ಈ ಹಿಂದೆಯೂ ಕೂಡ ಆರೋಪಿ ಸ್ವೀಟ್ ಬಾಕ್ಸ್ ಮತ್ತು ಗಿಫ್ಟ್ ಬಾಕ್ಸ್‌ಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರುತ್ತಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಿದ್ದ
ಈ ಹಿಂದೆ ಹಸನ್ ಸುದ್ದಿ ಸಂಗ್ರಹಿಸಲು ಹಲವು ಕಾರ್ಯಕ್ರಮಗಳು, ಪ್ರತಿಭಟನಾ ಸ್ಥಳಗಳಿಗೆ ಬರುತ್ತಿದ್ದ. ಈ ವೇಳೆ ಪರಿಚಯಿಸಿಕೊಂಡಿದ್ದ ಪ್ರತಿಷ್ಠಿತ ಮಾಧ್ಯಮಗಳ ಪತ್ರಕರ್ತರ ನಂಬರ್‌ಗಳನ್ನು ಪಡೆದು ವಾಟ್ಸ್‌ಆ್ಯಪ್ ಗ್ರೂಪ್ ಅನ್ನು ಕೂಡ ಕ್ರಿಯೆಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.